ಬೆಂಗಳೂರು: ಎಲ್ಲರಂತೆ ಹಂಸಲೇಖರವರ ವಿರುದ್ಧವೂ ತಕ್ಕ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಸಂಗೀತ ನಿರ್ದೇಶಕ ಹಂಸಲೇಖ ನವರ ಪ್ರಕರಣದ ಕುರಿತು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಆರಗ ” ಕಾನೂನಿನ ಮುಂದೆ ಎಲ್ಲರೂ ಸಮಾನರು, ಯಾರು ದೊಡ್ಡವರಲ್ಲ ಎಲ್ಲರ ಮೇಲೂ ದೂರು ಬಂದಾಗ ತನಿಖೆ ನಡೆಸುವ ಹಾಗೆ ಹಂಸಲೇಖರವರ ವಿರುದ್ಧವೂ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾದಬ್ರಹ್ಮ ಹಂಸಲೇಖರವರು ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆಯನ್ನು ಖಂಡಿಸಿ ಪೇಜಾವರ ಶ್ರೀಗಳ ಕುರಿತು ಮಾತನಾಡಿದ್ದರು ಆದರೆ ಅವರು ಆಡಿದ್ದ ಮಾತಿನಿಂದ ಅನೇಕ ಜನರನ್ನು ಹಾಗೂ ಗುರುಗಳನ್ನು ದೇವರೆಂದೇ ಭಾವಿಸಿದ್ದ ಭಕ್ತರನ್ನು ಹಾಗೂ ಕೆಲವು ಸಮುದಾಯದವರನ್ನು ಕೆರಳಿಸಿತ್ತು.
ಅಖಿಲ ಭಾರತ ಬ್ರಾಹ್ಮಣ ಯುವ ವಿಪ್ರ ಸಂಘದ ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದರು ಬಸವನಗುಡಿಯಲ್ಲಿಯೂ ದೂರನ್ನು ಓರ್ವ ವ್ಯಕ್ತಿ ದಾಖಲಿಸಿದ್ದರು.
ಹಂಸಲೇಖರ ವಿರುದ್ಧ ಮೂರು ಪ್ರಕರಣಗಳು ಬೆಂಗಳೂರಿನ ಪ್ರತ್ಯೇಕ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಪೊಲೀಸರು ಹಂಸಲೇಖರವರಿಗೆ ಎರಡು ಬಾರಿ ನೋಟಿಸ್ ನನ್ನು ನೀಡಿದ್ದಾರೆ ಆದರೂ ಸಹ ಠಾಣೆಗೆ ಬಾರದ ಕಾರಣ ಹಾಗೂ ಅವರು ಸಂಪರ್ಕಕ್ಕೆ ಸಿಗದ ಕಾರಣ ಅವರ ಪತ್ನಿಗೆ ನೋಟಿಸ್ ನೀಡಿದ್ದಾರೆ.