ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಸ್ಥೆಯ ಬೈಲಾ ಹಾಗೂ ವೃಂದ ಮತ್ತು ನೇಮಕಾತಿ ಆಧಾರದ ಮೇಲೆ ನಿಯಮಾನುಸಾರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸ ತಕ್ಕದ್ದು.
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಾದ ಅರಳುಗುಪ್ಪೆ, ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ನಿರ್ವಹಣೆಗಾಗಿ ಸೃಜನೆಯಾಗಿರುವ ಹುದ್ದೆಗಳ ಪೈಕಿ 35 STAFF NURSE ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಸಂಸ್ಥೆಯ ಬೈಲಾ ಹಾಗೂ ವೃಂದ ಮತ್ತು ನೇಮಕಾತಿ ಆಧಾರದ ಮೇಲೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿದ ಶೈಕ್ಷಣಿಕ ದಾಖಲಾತಿಗಳ ಒಂದು ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸ ತಕ್ಕದ್ದು .
ಕೊನೆಯ ದಿನಾಂಕ; 10.04.2023
ಸಮಯ; ಸಂಜೆ: 5.00 ಗಂಟೆಯೊಳಗಾಗಿ,
ಸ್ಥಳ; ನಿರ್ದೇಶಕರ ಕಛೇರಿ, ಹಳೆಯ ಪಿ.ಡಬ್ಲ್ಯೂ ಡಿ ಬಿಲ್ಡಿಂಗ್, ಆಜಾದ್ ಪಾರ್ಕ್ ಹತ್ತಿರ, ಚಿಕ್ಕಮಗಳೂರು ಇಲ್ಲಿಗೆ ಮುದ್ರಾಂ/ಅಂಚೆ ನೋಂದಣಿ ಮೂಲಕ ಸಲ್ಲಿಸುವುದು.
ಹುದ್ದೆಗಳ ವಿವರ;
ಸ್ಟಾಫ್ ನರ್ಸ್
ವಿದ್ಯಾರ್ಹತೆ;
1. ಬಿ.ಎಸ್.ಸಿ ನರ್ಸಿಂಗ್ ಕೋರ್ಸ್ ನಲ್ಲಿ ಪದವಿ ಹೊಂದಿರಬೇಕು.
2. ಎಂ.ಎಸ್ಸಿ ನರ್ಸಿಂಗ್ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.
ವಯೋಮಿತಿ
1.) SC/ST or CAT. 1-43 years
2.) cat.||(a) or ||(b), |||(a) or |||(b) of other back ward classes-40years and
3.) General-38 years
ಮಾಸಿಕ ವೇತನ;
20,000/- ಸಂಚಿತ ವೇತನ
ಶುಲ್ಕ;
ಅರ್ಜಿಯೊಂದಿಗೆ ಜನರಲ್ ಅಭ್ಯರ್ಥಿಗಳಿಗೆ ರೂ.500/- ಹಾಗೂ sc/st/cat-1 ಅಭ್ಯರ್ಥಿಗಳಿಗೆ ರೂ.250/-
ಶುಲ್ಕವನ್ನು ನಿರ್ದೇಶಕರು, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಚಿಕ್ಕಮಗಳೂರು ಇವರ ಹೆಸರಿನಲ್ಲಿ ಡಿ.ಡಿ ಮೂಲಕ ಪಡೆದು ಸಲ್ಲಿಸತಕ್ಕದ್ದು.
ಅರ್ಜಿಯನ್ನು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂತರ್ಜಾಲದಲ್ಲಿ https://cimschikkamagaluru.karnataka.gov.in ಮೂಲಕ ಡೌನ್ ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಷರತ್ತು ಮತ್ತು ನಿಭಂದನೆಗಳು:
1) ಮೇಲಿನ ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಹಾಗೂ ಮಾನ್ಯತೆ ಹೊಂದಿದ ಕಾಲೇಜುಗಳಲ್ಲಿ ಕೋರ್ಸ್ ಅನ್ನು ಹೊಂದಿರತಕ್ಕದ್ದು.
2) ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಇರುತ್ತದೆ. ಯಾವುದೇ ಖಾಯಂ ನೇಮಕಾತಿಗಾಗಿ
ಪರಿಗಣಿಸಲಾಗುವುದಿಲ್ಲ ಹಾಗೂ ಅಭ್ಯರ್ಥಿಗಳು ಯಾವುದೇ ಹಕ್ಕನ್ನು ಚಲಾಯಿಸುವಂತಿಲ್ಲ.
3) ಗುತ್ತಿಗೆ ಆಧಾರದ ಅವಧಿಯು 6 ತಿಂಗಳು ಮಾತ್ರ ಇದ್ದು, ಹಾಗೂ ಹುದ್ದೆಗಳ ನವೀಕರಣವು ಸರ್ಕಾರದ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತದೆ.
4) ಕರ್ನಾಟಕ ನರ್ಸಿಂಗ್ ಕೌನ್ಸಿಲಿಂಗ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.
5) ಪದವಿ ಪೂರೈಸಿದ ನಂತರ ಕನಿಷ್ಠ 3 ವರ್ಷಗಳ ಕರ್ತವ್ಯದ ಅನುಭವವನ್ನು ಹೊಂದಿರತಕ್ಕದ್ದು.