ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಕಾಂಗ್ರೆಸ್ ಟಿಕೆಟ್ ಘೋಷಣೆಯಾದಾಗಿನಿಂದಲೂ ಜಿಲ್ಲಾ ಕಾಂಗ್ರೆಸ್ ಗೆ ಒಂದಿಲ್ಲೊಂದು ಶಾಕ್ ಎದುರಾಗುತ್ತಿವೆ. ಇದೀಗ ಕಾಂಗ್ರೆಸ್ ಪಕ್ಷದ ಪ್ರಾರ್ಥಮಿಕ ಸದಸ್ಯತ್ವಕ್ಕೆ ಹಾಗೂ ಜಿಲ್ಲಾ ವಕ್ತಾರ ಸ್ಥಾನಕ್ಕೆ ಹೆಚ್ ಎಸ್ ಪುಟ್ಟಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಉದ್ದೆಗೆ ವಿನಾಯಕ ರಾಜೀನಾಮೆ
ಎಚ್.ಡಿ. ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ತೊರೆಯುವುದಾಗಿ ಬೀರೂರು ಕೆ.ಎಂ.ವಿನಾಯಕ ತಿಳಿಸಿದ್ದರಾರೆ.
ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ನ್ಯಾಯದಡಿ ತರೀಕೆರೆಯಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ. ಕಡೂರಿನಲ್ಲಿ ಕುರುಬರಿಗೆ, ಕಡೂರಿನಲ್ಲಿ ಲಿಂಗಾಯತರಿಗೆ ನೀಡಿದರೆ ತರೀಕೆರೆಯಲ್ಲಿ ಕುರುಬರಿಗೆ ಎಂಬ ನೀತಿಯನ್ನು ಬದಿಗೊತ್ತಿ ಎರಡೂ ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಮಣೆ ಹಾಕಲಾಗಿದೆ ಎಂದಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೆಟ್ರೋಲ್ ಬಂಕ್ ಗಳಲ್ಲಿ ಈ 6 ಸೇವೆಗಳನ್ನು ಉಚಿತವಾಗಿ ನೀಡುವುದು ಕಡ್ಡಾಯ
- ಪೋಸ್ಟ್ ಆಫೀಸ್ನಲ್ಲಿರುವ ಈ 5 ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?
- ಕಂತೆ ಕಂತೆ ಹಣ ಬ್ಯಾಗಿಗೆ ತುಂಬುವ ವಿಡಿಯೋ ವೈರಲ್
ಏಳು ಮಂದಿಯನ್ನು ಕಡೆಗಣಿಸಿ ಲಿಂಗಾಯತ ಎಂಬ ಕಾರಣಕ್ಕೆ ತಮ್ಮಯ್ಯ ಅವರಿಗೆ ಟಿಕೆಟ್ ಘೋಷಿಸಿರುವುದು ಪಕ್ಷ ನಿಷ್ಠರಿಗೆ ಅಸಮಾಧಾನ ಉಂಟು ಮಾಡಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಚುನಾವಣೆಗೆ ನಿಲ್ಲಲು ಹರಸಾಹಸ ಪಟ್ಟರು ವರಿಷ್ಠರು ಟಿಕೆಟ್ ನೀಡಿರಲಿಲ್ಲ:
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಾ ಬಂದಿದೇನೆ. ಪಕ್ಷ ನನ್ನ ಕಾರ್ಯ ನೋಡಿ ಈ ಬಾರಿಯಾದರೂ ಟಿಕೆಟ್ ನೀಡುವ ನಿರೀಕ್ಷೆ ಇತ್ತು ಆದರೆ ಅದು ಹುಸಿಯಾಯಿತು. ಈಗಾಗಲೇ ಕೆಲವು ಪಕ್ಷದ ನಾಯಕರು ಭೇಟಿ ಮಾಡಿ ಪಕ್ಷ ಸೇರುವಂತೆ ಮನವಿ ಮಾಡಿದ್ದಾರೆ. ನಾನು ಒಪ್ಪಿಲ್ಲ. ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆ ಕರೆದು ಇನ್ನೆರಡು ದಿನಗಳ ಬಳಿಕ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.