ನವದೆಹಲಿ: ನೂರಾರು ವರ್ಷಗಳ ಹಿಂದೆ ವಾರಣಾಸಿ ಇಂದ ಕದ್ದೋಯ್ದಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆಲ ದಿನಗಳ ಹಿಂದೆ ಕೆನಡಾ ಭಾರತಕ್ಕೆ ಹಸ್ತಾಂತರಿಸಿದೆ.
ಇಂದು ಸಂಜೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ದೇವಿಯ ವಿಗ್ರಹವನ್ನು ಉತ್ತರ ಪ್ರದೇಶದ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.
ನೂರು ವರ್ಷಕ್ಕೂ ಹಿಂದೆ ವಾರಣಾಸಿ ದೇವಾಲಯದಲ್ಲಿದ್ದ ಅನ್ನಪೂರ್ಣ ದೇವಿಯ ವಿಶೇಷವಾದ ಅಪರೂಪದ ವಿಗ್ರಹವನ್ನು ಕದ್ದು ಕೆನಡಾಗೆ ಕದ್ದೋಯ್ಯಲಾಗಿತ್ತು. ಆ ವಿಗ್ರಹವನ್ನು ಕೆನಡಾ ಕೆಲ ದಿನಗಳ ಹಿಂದೆ ಭಾರತಕ್ಕೆ ಹಸ್ತಾಂತರಿಸಿತ್ತು. ದೇವಿಯ ವಿಗ್ರಹ 17 ಸೆಂ. ಮೀ ಎತ್ತರವಿದ್ದು. 9 ಸೆಂ ಮೀ. ಅಗಲವಿದ್ದು ವಿಗ್ರಹದ ದಪ್ಪ 4 ಸೆಂ. ಮೀ. ಇದೆ ಎಂದು ವರದಿ ತಿಳಿಸಿದೆ.
ಇದೇ ನವೆಂಬರ್ 12 ರಂದು ದೇವಿಯ ವಿಗ್ರಹವನ್ನು ಕನೌಜ್ ಗೆ ಸಾಗಿಸಿ. ನಂತರ ನಂ.14 ರಂದು ಅಯೋದ್ಯೆಗೆ ತಲುಪಿ ಅನಂತರ ನವೆಂಬರ್ ನಂ. 15 ರಂದು ಪ್ರಸಿದ್ಧ ಕಾಶಿಯ ವಿಶ್ವನಾಥ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ವರದಿಯನ್ನು ನೀಡಿದೆ.