Sunday, December 3, 2023
Homeಇತರೆಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ: 'ಭಾರತಕ್ಕೆ ತೆರಳುವ ಮುನ್ನ ಹುಷಾರ್' ಎಂದು ಪ್ರಜೆಗಳಿಗೆ ಎಚ್ಚರಿಸಿದ...

ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ: ‘ಭಾರತಕ್ಕೆ ತೆರಳುವ ಮುನ್ನ ಹುಷಾರ್’ ಎಂದು ಪ್ರಜೆಗಳಿಗೆ ಎಚ್ಚರಿಸಿದ ಅಮೇರಿಕಾ.

ನವದೆಹಲಿ: ಭಾರತಕ್ಕೆ ಹೋಗುವ ಮುನ್ನ ಹುಷಾರ್ ಎಂದು ಅಮೇರಿಕಾ ಎಚ್ಚರಿಕೆಯ ಸಂದೇಶವನ್ನು ಪ್ರಜೆಗಳಿಗೆ ತಿಳಿಸಿದೆ.

ಭಾರತದಲ್ಲಿ ಅತ್ಯಾಚಾರ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಅಮೇರಿಕ ತಮ್ಮ ಪ್ರಜೆಗಳಿಗೆ ಪ್ರಯಾಣ ಸಲಹೆ ಸೂಚನೆಯನ್ನು ಬಿಡುಗಡೆ ಮಾಡಿದೆ ಆ ಸಲಹಾ ಪಟ್ಟಿಯಲ್ಲಿ ಭಾರತ 2 ಹಂತದಲ್ಲಿ ಇರುವುದು ತಿಳಿದುಬಂದಿದೆ.

ಭಾರತ ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಪ್ರವಾಸಿ ತಾಣಗಳಲ್ಲಿಯೇ ಹೆಚ್ಚಾಗುತ್ತಿದ್ದೂ ಭಾರತೀಯ ಅಧಿಕಾರಿಗಳು ವರದಿ ಮಾಡಿದ್ದಾರೆ ಆದ್ದರಿಂದ ಭಾರತಕ್ಕೆ ಹೋಗುವ ಮುನ್ನ ಹೆಚ್ಚಿನ ಎಚ್ಚರಿಕೆಯಿಂದಿರಲು ನವೆಂಬರ್ 15 ರಂದು ಅಮೇರಿಕ ಪ್ರಜೆಗಳಿಗೆ US Department ಅಮೇರಿಕ ಪ್ರಜೆಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಪರಾಧ ಮಾತ್ರವಲ್ಲದೇ ಭಯೋತ್ಪಾದನೆ, ಜನಾಂಗೀಯ ಗುಂಪುಗಳ ದಂಗೆ ಹಾಗೂ ನಕ್ಸಲರ ದಂಗೆ ಹೆಚ್ಚಳವಾಗುತ್ತಿರುವುದರಿಂದ ಅಮೇರಿಕನ್ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

Most Popular

Recent Comments