ಬೆಂಗಳೂರು: ಬೆಂಗಳೂರಿನ ಕೇಂದ್ರ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು 80 ಕೆ.ಜಿಯಷ್ಟು ಅಂಬರ್ಗ್ರಿಸ್ ನನ್ನು ವಶಕ್ಕೆ ಪಡೆದಿದ್ದಾರೆ.
ಐದು ಮಂದಿಯಿoದ ಅಂಬರ್ಗ್ರಿಸ್ ನ್ನು ವಶಕ್ಕೆ ಪಡೆಯಲಾಗಿದ್ದು, ನಿಷೇಧಿತ ಅಂಬರ್ಗ್ರಿಸ್ ನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೋಲೀಸರಿಗೆ ದೊರೆತ ನಿಖಟವಾದ ಮಾಹಿತಿಯನ್ನು ಆಧರಿಸಿ ಬೆಂಗಳೂರಿನ ನಿವಾಸಿಗಳಾದ ಮುಜೀಬ್ ಪಾಶಾ (48) ಮೊಹಮ್ಮದ್ ಅಲಿಯಾಸ್ ಮುನ್ನ (45) ಗುಲಾಬ್ ಚಂದ್ ಅಲಿಯಾಸ್ ಗುಡ್ಡು (40) ಹಾಗೂ ಸಂತೋಷ್ (31) ಅವರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ರಾಯಚೂರಿನ ಜಗನ್ನಾಥಾಚಾರ್ (52) ನವರನ್ನು ಬಂಧಿಸಲಾಗಿದೆ.
ಮಾಹಿತಿಯ ಆಧಾರದಲ್ಲಿ ಸಿಸಿಬಿ ಗೊಡೋನ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಅಂಬರ್ಗ್ರಿಸ್ ನ್ನು ವಶಕ್ಕೆ ಪಡೆದಿದ್ದಾರೆ. ಭಾರತದಲ್ಲಿ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಅಂಬರ್ಗ್ರಿಸ್ ನ ಮಾರಾಟ ಹಾಗೂ ದಾಸ್ತಾನನ್ನು ನಿಷೇಧಿಸಲಾಗಿದೆ.