ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಳೆ ಆರ್ಭಟ ಹೆಚ್ಚಾದ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಕರ್ನಾಟದಿಂದ ತೆರಳಿದ್ದ ಹಲವು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಯಾತ್ರೆಗೆ ಹೋಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಲದ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೆ ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ; ಶೃಂಗೇರಿ: ರಿಜಿಸ್ಟ್ರೇಷನ್ ನಂಬರ್ ಇಲ್ಲದ ಕಾರ್ ನಲ್ಲಿ ಬಂದ್ರು.. 3000 ರೂ. ಪೆಟ್ರೋಲ್ ಹಾಕಿಸಿ ಹಣ ಕೊಡದೆ ಪರಾರಿಯಾದ್ರು!
ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಎಂಬ ಐವರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮಳೆಗಾಲದಲ್ಲಿ ಗೆಳೆಯರ ಜೊತೆ ಟ್ರೆಕ್ಕಿಂಗ್ ಮಾಡಲು ಚಿಕ್ಕಮಗಳೂರಿನ ಬೆಸ್ಟ್ ಜಾಗ ಇಲ್ಲಿದೆ ನೋಡಿ
- ಟ್ವಿಟ್ಟರ್ ಗೆ ಟಕ್ಕರ್ ನೀಡಲು ಬಿಡುಗಡೆ ಮಾಡಿದ ಥ್ರೆಡ್ಸ್ ಆಪ್ ಹೇಗಿದೆ..
- arecanut price: 08 ಜುಲೈ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಕಳೆದ ವಾರ ಯಾತ್ರೆಗೆ ತೆರಳಿದ್ದ ಈ ಐವರ ತಂಡ ಇದೀಗ ಶೇಷನಾಗ್ ಪ್ರದೇಶದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ; ಸರ್ಕಾರಿ ಬಸ್ಸಿನ ಗ್ಲಾಸ್ ಒಡೆದು, ಚಾಲಕನ ಮೇಲೆ ಹಲ್ಲೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕುಡಿದ ಮತ್ತಿನಲ್ಲಿ ಯುವಕರು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಗ್ಲಾಸ್ ಒಡೆದು, ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಡೆದಿದೆ.
ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಗಾಜಿನ ಮದ್ಯದ ಬಾಟಲಿಯನ್ನ ಬಸ್ಸಿನ ಮೇಲೆ ಎಸೆದಿದ್ದಾರೆ. ಇದು ಬಸ್ಸಿನ ಮುಂಭಾಗದ ಗ್ಲಾಸಿಗೆ ತಗುಲಿ ಗಾಜು ಪುಡಿಯಾಗಿದೆ. ಈ ವೇಳೆ ಕಡೂರು ಕೆ.ಎಸ್.ಆರ್.ಟಿ.ಸಿ ವಿಭಾಗದ ಚಾಲಕ ಸತೀಶ್, ಕಾರಿನಲ್ಲಿದ್ದವರನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯುವಕರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಚಾಲಕ ಸತೀಶ್ ಅವರನ್ನು ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ ಕಿರಣ್, ಸತೀಶ್, ಸಚಿನ್, ಸುಪ್ರೀತ್ ಎಂಬುವವರನ್ನ ಬಂಧಿಸಲಾಗಿದ್ದು, ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.