Tuesday, November 28, 2023
Homeಸುದ್ದಿಗಳುದೇಶ16 ವರ್ಷದ ನಂತರ ಸ್ವಗೃಹಕ್ಕೆ ಹುತಾತ್ಮ ಯೋಧನ ಶವ, ಆದೆಷ್ಟೋ ವರ್ಷಗಳ ನಂತರ ಬಾವುಕರಾದ ಕುಟುಂಬಸ್ಥರು

16 ವರ್ಷದ ನಂತರ ಸ್ವಗೃಹಕ್ಕೆ ಹುತಾತ್ಮ ಯೋಧನ ಶವ, ಆದೆಷ್ಟೋ ವರ್ಷಗಳ ನಂತರ ಬಾವುಕರಾದ ಕುಟುಂಬಸ್ಥರು

ಗಾಜಿಯಾಬಾದ್: 2005 ರಲ್ಲಿ ಪರ್ವತದ ಮೇಲೆ ದ್ವಜವನ್ನು ಹಾರಿಸಿ ಹಿಂದಿರುಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಹುತಾತ್ಮರಾಗಿದ್ದ ಯೋಧರೊಬ್ಬರ ಪಾರ್ಥಿವ ಶರೀರ ಬರೋಬ್ಬರಿ 16 ವರ್ಷದ ನಂತರ ಇಂದು ಅವರ ಹುಟ್ಟೂರಿಗೆ ಆಗಮಿಸಿದೆ.

ಸಿಯಾಚಿನ್ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಸೈನಿಕ ಅಮರೀಶ್ ತ್ಯಾಗಿ ಮುರಾದನಗರ ಪ್ರದೇಶದ ಹಿಸಲಿ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಗಂಡೆದೆಯ ಈ ವೀರ ಯೋಧವನ್ನು ಮೊದಲು ಕಾರ್ಗಿಲ್ ನಲ್ಲಿ ಕರ್ತವ್ಯವನ್ನು ನಿರ್ವಹಿಸಲು ಯೋಜಿಸಲಾಗಿತ್ತು, ಧೈರ್ಯಶಾಲಿ ವ್ಯಕ್ತಿ ಹಾಗೂ ಪರ್ವತಾರೋಹಿಯಾಗಿದ್ದರು, ಹಿಮಾಲಯ ಮತ್ತು ಸಿಯಾಚಿನ್ ಮೂಲಕ ಹಾದುಹೋಗುವ ಅತ್ಯುನ್ನತ ಶಿಖರದ ಮೇಲೆ ಹಲವಾರು ಬಾರಿ ತ್ರಿವರ್ಣ ದ್ವಜವನ್ನು ಹಾರಿಸಿದ್ದರು.

ಹುತಾತ್ಮ ಯೋಧ ಅಮರೀಶ್ ತ್ಯಾಗಿ 2005 ರಲ್ಲಿ ಅವರು ತಮ್ಮ ತಂಡದೊಂದಿಗೆ ಧ್ವಜ ಹಾರಿಸಲು ಸಿಯಾಚಿನ್‌ನ ಮೇಲ್ಭಾಗಕ್ಕೆ ಹೋಗಿದ್ದರು . ಆದರೆ ಹಿಂದಿರುಗುವಾಗ ಉತ್ತರಾಖಂಡದಲ್ಲಿ ಒಂದು ಅಪಘಾತ ಸಂಭವಿಸಿತ್ತು, ಎಲ್ಲಾ ಸೈನಿಕರು ಹಿಮದಲ್ಲಿ ಹೂತು ಹೋಗಿದ್ದರು. ಶೋಧ ಕಾರ್ಯದಲ್ಲಿ ಮೂವರು ಸೈನಿಕರ ಮೃತದೇಹವನ್ನು ಹೊರತೆಗೆಯಲಾಗಿತ್ತು. ಆದರೆ ಅಮರೀಶ್ ಶವ ಪತ್ತೆಯಾಗಲೇ ಇಲ್ಲ. ಅವರ ದೇಹವು ಆಳವಾದ ಕಮರಿಗೆ ಬಿದ್ದಿದೆ ಎಂದೇ ಅಂದಾಜಿಸಲಾಗಿತ್ತು. ಬರೋಬ್ಬರಿ 16 ವರ್ಷಗಳ ನಂತರ ಸೇನೆಯು ಇದೀಗ ಅಮರೀಶ್​ ಮೃತದೇಹವನ್ನು ಪತ್ತೆ ಹಚ್ಚಿದೆ.

ಅಮರೀಶ್ ಅವರ ಪಾರ್ಥಿವ ಶರೀರ ಇಂದು ಅವರ ಸ್ವಗ್ರಾಮಕ್ಕೆ ತಲುಪಲಿದೆ. 16 ವರ್ಷಗಳಿಂದ ಕುಟುಂಬಕ್ಕೆ ಅಮರೀಶ್ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬುದೇ ತಿಳಿದಿರಲಿಲ್ಲ. ಸತತ ಹದಿನಾರು ವರ್ಷಗಳ ನಂತರ ಅವರ ಅಂತ್ಯಕ್ರಿಯೆಗೆ ಇಂದು ಸಿದ್ಧತೆ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದ ಸದಸ್ಯರು ಅದೆಷ್ಟೋ ವರ್ಷಗಳ ನಂತರ ಮತ್ತೆ ಭಾವುಕರಾಗಿದ್ದಾರೆ.

ಹುತಾತ್ಮ ಯೋಧ ಅಮರೀಶ್ ತ್ಯಾಗಿ ಅವರ ತಂದೆ ಕೂಡ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. 1962 ಮತ್ತು 1965 ರ ಯುದ್ಧಗಳಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಆದರೆ ಈಗ ಅಮರೀಶ್ ತಂದೆ ಮತ್ತು ತಾಯಿ ಇಬ್ಬರೂ ಮರಣಹೊಂದಿದ್ದಾರೆ.

Most Popular

Recent Comments