ಕೊಪ್ಪಳ: ಬಿಜೆಪಿ ಮುಖಂಡರಲ್ಲಿ ಯಾರಾದರೂ ಮರಣಹೊಂದಿದರೆ ಅವರಿಗೆ ಕಾಂಗ್ರೆಸ್ ಪಕ್ಷದಿಂದ 1 ಕೋಟಿ ಹಣವನ್ನು ನೀಡುವುದಾಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲಿನ ವಾಹನಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ರೈತರ ಮೇಲೆ ಹಾಯಿಸಿ ರೈತರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸರ್ಕಾರ 45 ಲಕ್ಷ ರೂ. ಪರಿಹಾರವನ್ನು ಮಾತ್ರ ನೀಡಿದೆ.
ರೈತರು ಚಳಿ, ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಅಲ್ಲದೇ ರೈತರ ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತನ ಮೇಲೆ ಹರಿದು 8 ಜನ ರೈತರು ಸಾವಿಗೀಡಾಗಿದ್ದಾರೆ ಆರೋಪಿಯನ್ನು ಬಂಧಿಸದೆ ಕೇವಲ 45 ಲಕ್ಷ ಹಣವನ್ನು ನೀಡಿದೆ ಆದ್ದರಿಂದ ಬಿಜೆಪಿಯವರು ಸಾವಿಗೀಡಾದರೆ 1ಕೋಟಿ ಹಣವನ್ನು ಕಾಂಗ್ರೆಸ್ ಪಕ್ಷ ನೀಡುತ್ತದೆ ಎಂದು ಹೇಳಿದರು.
ಅಲ್ಲದೇ ಪೊಲೀಸರು ಸಹ ಬಿಜೆಪಿ ಚೇಲಾಗಳಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿಯನ್ನು ನಡೆಸಿದರು.