Sunday, September 24, 2023
Homeಸುದ್ದಿಗಳುದೇಶಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನಿಗಳಿಗೆ ಶುಭ ಕೋರಿದ ಅಲ್​ ಖೈದಾ,

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನಿಗಳಿಗೆ ಶುಭ ಕೋರಿದ ಅಲ್​ ಖೈದಾ,

ಯುನೈಟೆಡ್ ಸ್ಟೇಟಸ್(US) ಮೇಲೆ 2001ರ ಸೆಪ್ಟೆಂಬರ್ 11ರಂದು ದಾಳಿ ನಡೆಸಿದ್ದಂತಹ ಉಗ್ರ ಸಂಘಟನೆ ಅಲ್ ಖೈದಾ  ಇದೀಗ ತಾಲಿಬಾನ್‌ಗೆ ಅಭಿನಂದನೆಯನ್ನು ಸಲ್ಲಿಸಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನಿಗಳಿಗೆ ಶುಭ ಕೋರಿದಂತಹ ಅಲ್ ಖೈದಾ, ಕಾಶ್ಮೀರಕ್ಕೂ ಇದೇ ರೀತಿ ಸ್ವಾತಂತ್ರ‍್ಯವು ಸಿಗಬೇಕು ಎಂದು ಹೇಳಿದೆ.

ಆಗಸ್ಟ್ 15ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಆದರೂ ಕಾಬೂಲ್ ಏರ್‌ಪೋರ್ಟ್ ಅನಂತರವೂ ಅಮೆರಿಕ ಸೇನೆಯ ವಶದಲ್ಲೇ ಇತ್ತು. ಆಗಸ್ಟ್ 30ರಂದು ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನ್ ನನ್ನು ತೊರೆದು ಹೋಗಿದೆ. ಆ ಕ್ಷಣದಿಂದ ಕಾಬೂಲ್ ಏರ್‌ಪೋರ್ಟ್ ಸೇರಿ ಸಂಪೂರ್ಣ ಅಫ್ಘಾನಿಸ್ತಾನವೇ ತಾಲಿಬಾನಿಗಳ ವಶವಾಗಿದೆ.

ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುತ್ತಿದ್ದಂತೆ ಅಲ್ ಖೈದಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಲೆವೆಂಟ್, ಸೋಮಾಲಿಯಾ, ಯೆಮೆನ್, ಕಾಶ್ಮೀರ ಮತ್ತು ಉಳಿದ ಇಸ್ಲಾಮಿಕ್ ಪ್ರದೇಶಗಳನ್ನೂ ಇದೇ ರೀತಿಯಲ್ಲಿ ಮುಸ್ಲಿಮರ ಶತ್ರುಗಳ ಹಿಡಿತದಿಂದ ಸ್ವತಂತ್ರಗೊಳಿಸಿ ಎಂದು ತಾಲಿಬಾನ್‌ಗೆ ಹೇಳಿದೆ. ಹಾಗೇ, ಓ ಅಲ್ಲಾ, ಜಗತ್ತಿನಾದ್ಯಂತ ಬಂಧನಕ್ಕೆ ಒಳಗಾಗಿರುವ ಎಲ್ಲ ಮುಸ್ಲಿಂ ಕೈದಿಗಳಿಗೂ ಬಿಡುಗಡೆಯ ಭಾಗ್ಯವನ್ನು ಕಲ್ಪಿಸು ಎಂದು ಬೇಡಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬರುತ್ತಿದ್ದಂತೆ ಪಾಕಿಸ್ತಾನವೂ ಕೂಡ ಕಾಶ್ಮೀರದ ವಿಚಾರದಲ್ಲಿ ತುಂಬ ಉತ್ಸಾಹವನ್ನು ತೋರಿಸುತ್ತಿದೆ. ತಾಲಿಬಾನಿಗಳು ಖಂಡಿತ ನಮಗಾಗಿ ಕಾಶ್ಮೀರವನ್ನು ಗೆದ್ದುಕೊಡುತ್ತಾರೆ ಎಂದು ಅಲ್ಲಿನ ನಾಯಕರು ತುಂಬ ನಿರೀಕ್ಷೆಯನ್ನಿಟ್ಟುಕೋಂಡು ಕುಳಿತಿದ್ದಾರೆ. ಆದರೆ ತಾಲಿಬಾನ್ ಕಾಶ್ಮೀರಕ್ಕೂ ನಮಗೂ ಸಂಬoಧವಿಲ್ಲ. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ ಎಂದು ಹೇಳಿದೆ. ಅಷ್ಟೇ ಅಲ್ಲ, ಪ್ರಾರಂಭದಿoದಲೂ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತ ಬಂದಿದೆ. ನಮ್ಮ ನೆರೆರಾಷ್ಟ್ರಗಳಲ್ಲೇ ಭಾರತ ಪ್ರಮುಖ ರಾಷ್ಟ್ರವಾಗಿದೆ. ಅದರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಬಯಸುತ್ತೇವೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ.

Most Popular

Recent Comments