ಬೆಂಗಳೂರು: ಖಲಿಸ್ತಾನ್ ಉಗ್ರರು ರೈತರ ಹೋರಾಟವನ್ನು ಮುಂದಿಟ್ಟುಕೊಂಡು ಹಿಂಸಾಚಾರ ನಡೆಸಲು ನಿರ್ಧರಿಸಿದ ಸಂಚನ್ನು ವಿಫಲಗೊಳಿಸಲು ನರೇಂದ್ರ ಮೋದಿ ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಹಿಂಪಡೆಯಲು ನಿರ್ಧಾರ ಮಾಡಿದರು ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಹೇಳಿದರು.
ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈತರ ಹೆಸರನ್ನು ಹೇಳಿಕೊಂಡು ನಕ್ಸಲರು, ಖಲಿಸ್ತಾನ್ ಉಗ್ರರು ಸೇರಿಕೊಂಡಿದ್ದಾರೆ ಅವರು ಬಹುದೊಡ್ಡ ಮಟ್ಟದಲ್ಲಿ ದೇಶಕ್ಕೆ ಹಾನಿಯುಂಟು ಮಾಡಲು ಸಂಚನ್ನು ರೂಪಿಸಲು ನಿರ್ಧರಿಸಿದ್ದ ಖಚಿತ ಮಾಹಿತಿಯ ಮೇರೆಗೆ ಆ ಉಗ್ರರು ರೂಪಿಸಿದ್ದ ಸಂಚನ್ನು ವಿಫಲಗೊಳಿಸಲು ಪ್ರಧಾನಿ ಮೋದಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆದು ಆದೇಶ ಹೊರಡಿಸಿದರು. ಆದರೂ ಸಹ ರೈತರು ಪ್ರತಿಭಟನೆಯನ್ನು ಮುಂದುವರೆಸುತ್ತಲೇ ಇರುವುದರಿಂದ ಈ ರೈತರ ಹಿಂದೆ ಯಾವುದೋ ಹಿತಾಸಕ್ತಿ ಪ್ರತಿಭಟನೆ ಇರುವುದು ತಿಳಿಯುತ್ತದೆ ಎಂದರು.
ಪ್ರಧಾನಿ ಮೋದಿಯವರು ಉಗ್ರರು ರೂಪಿಸಿದ್ದ ಸಂಚನ್ನು ತಡೆಯಲು ಮೂರು ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದರೇ ಹೊರತು ಚುನಾವಣೆಯಲ್ಲಿ ಸೋಲಿನ ಭಯದಿಂದಲ್ಲ, ಈ ಕೃಷಿ ಕಾಯ್ದೆಗಳ ವಿಚಾರದಲ್ಲಿ ತಾತ್ಕಾಲಿಕ ಹಿನ್ನೆಡೆ ಆಗಿರಬಹುದು ಆದರೆ ಮುಂದೆ ದೇಶದಲ್ಲಿ ಮತ್ತಷ್ಟು ದೇಶದಲ್ಲಿ ಸುಧಾರಣೆ ತರುವಂತಹ ಕಾಯ್ದೆಗಳನ್ನು ಸರ್ಕಾರ ಜಾರಿ ತರುತ್ತದೆ ಎಂದರು.