Saturday, June 10, 2023
Homeಮಲೆನಾಡುಪ್ರಗತಿಯತ್ತ ಸಾಗುತ್ತಿರುವ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ.

ಪ್ರಗತಿಯತ್ತ ಸಾಗುತ್ತಿರುವ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ.

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಮಗ್ರತೆಯನ್ನು ಅಳವಡಿಸಿಕೊಂಡು ಪ್ರಗತಿಯತ್ತ ಸಾಗುತ್ತಿರುವಂತಹ ರೈತರನ್ನು ಗುರುತಿಸಿ ವಿವಿ ವ್ಯಾಪ್ತಿಯ ಪ್ರತಿ ಜಿಲ್ಲೆಗೆ ಒಬ್ಬರಿಗೆ ಕೃಷಿ ಮೇಳದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ,

ವಿವಿ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗಿನ ರೈತ ಮತ್ತು ರೈತ ಮಹಿಳೆಯರು ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದು. ಕೃಷಿ ಕಸುಬು ಹಾಗೂ ಇತರ ಉಪ ಕಸುಬುಗಳನ್ನು ಗಣನೆಗೆ ತೆಗೆದುಕೊಂಡು ಸಮಗ್ರ ಕೃಷಿ ತತ್ವಗಳನ್ನಾಧರಿಸಿ ಪ್ರಗತಿ ಸಾಧಿಸಿದ ಕೃಷಿಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಹ ಆಸಕ್ತ ರೈತರು ಸಂಬoಧಪಟ್ಟ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು ಅಥವಾ ವೆಬ್‌ಸೈಟ್‌ನಿಂದ (https://www.uahs.edu.in/)  ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸೆ.24ರೊಳಗೆ ಆಯಾ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆಗಳ ಕಚೇರಿಗೆ ಸಂಪರ್ಕವನ್ನು ಮಾಡಬಹುದು ಎಂದು ವಿವಿ ತಿಳಿಸಿದೆ.

ಶಿವಮೊಗ್ಗ- 9480838976, 8277932600
ದಾವಣಗೆರೆ- 9480838209
ಚಿಕ್ಕಮಗಳೂರು 9480838203, 8277930890
ಉಡುಪಿ- 9480838202, 8277932500
ಚಿತ್ರದುರ್ಗ 9480838201
ದಕ್ಷಿಣ ಕನ್ನಡ 8794706468, 8277931060
ಮಡಿಕೇರಿ 9480838210, 7259005540

Most Popular

Recent Comments