Wednesday, April 24, 2024
Homeಇತರೆಕಾಬೂಲ್: ಶಿಯಾ ಮಸೀದಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ, ನೂರಕ್ಕೂ ಅಧಿಕ ಮಂದಿ ಸಾವು.

ಕಾಬೂಲ್: ಶಿಯಾ ಮಸೀದಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ, ನೂರಕ್ಕೂ ಅಧಿಕ ಮಂದಿ ಸಾವು.

ಕಾಬೂಲ್: ಅಫ್ಘಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 100ಕ್ಕೂ ಅಧಿಕ ಜನ ಮರಣಹೊಂದಿದ್ದಾರೆ.

ದಾಳಿಯಲ್ಲಿ 100 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪೊಲೀಸ್ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

ಈ ದಾಳಿ ಅಮೆರಿಕ ಪಡೆಗಳು ಅಫ್ಗಾನಿಸ್ತಾನ ತೊರೆದ ಬಳಿಕ ನಡೆದ ಮೊದಲ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಾಗಿದೆ, ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯನ್ನು ನಡೆಸಿದ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಫ್ಗಾನಿಸ್ತಾನದಲ್ಲಿ ಈ ಹಿಂದೆ ಶಿಯಾ ಸಮುದಾಯದವರನ್ನು ಗುರಿಯಾಗಿಸಿ ಹಲವು ಬಾರಿ ದಾಳಿಯನ್ನು ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ದಾಳಿ ವೇಳೆ ಮಸೀದಿಯಲ್ಲಿದ್ದವರಲ್ಲಿ ಹೆಚ್ಚಿನವರು ಮೃತಪಟ್ಟಿದ್ದಾರೆ ಎಂದು ಕುಂದುಜ್‌ ಪ್ರಾಂತ್ಯದ ಉಪ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಒಬೈದಾ ಹೇಳಿದ್ದಾರೆ. ಮಸೀದಿಯ ಒಳಗೆ ಪ್ರಾರ್ಥನೆ ನಡೆಸುತ್ತಿದ್ದವರ ನಡುವೆ ಬೆರೆತು ಆತ್ಮಹತ್ಯಾ ಬಾಂಬರ್ ದಾಳಿಯನ್ನು ನಡೆಸಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶಿಯಾ ಸಹೋದರರಿಗೆ ಸುರಕ್ಷತೆ ಒದಗಿಸುವುದನ್ನು ತಾಲಿಬಾನ್ ಖಾತರಿಪಡಿಸುತ್ತದೆ ಎಂದು ಒಬೈದಾ ಭರವಸೆಯನ್ನು ನೀಡಿದ್ದಾರೆ.

Most Popular

Recent Comments