ನಮ್ಮ ಕರ್ನಾಟಕದಲ್ಲಿ ಇದ್ದುಕೊಂಡೆ ಕನ್ನಡ ಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿರುವವರ ನಡುವೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನವನ್ನು ಗೆದ್ದಿರುವ ನಮ್ಮ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಅಫ್ಘಾನಿಸ್ತಾನ್ ಮೂಲದ ವಿದ್ಯಾರ್ಥಿ ರೇಜಾ ಎಂಬುವವರು ಸುದ್ದಿಗಾರರೊಂದಿಗೆ ತಮ್ಮ ಊರಿನಲ್ಲಿ ತಾಲಿಬಾನ್ ಗಳು ನಡೆಸುತ್ತಿರುವ ಕೃತ್ಯಗಳನ್ನು ಕುರಿತು ಕನ್ನಡದಲ್ಲಿಯೇ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದ್ದಾರೆ, ಅವರು ಕನ್ನಡ ಭಾಷೆಯಲ್ಲಿಯೇ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತಹ ವೀಡಿಯೋ ಸಾಮಾಜಿಕ ತಾಣದಲ್ಲಿ ವೀಕ್ಷಿಸಿದಂತಹ ಕನ್ನಡಿಗರಿಗೆ ಸಂತಸವನ್ನು ತಂದು ಕೊಟ್ಟಿದೆ.
ಅಫ್ಘಾನಿಸ್ತಾನ್ ನಲ್ಲಿ ಎಲ್ಲಾ ಸ್ಥಳದಲ್ಲಿಯೂ ಕೃತ್ಯವನ್ನು ಎಸಗುತ್ತಿದಾರೆ ಈಗ ಅಫ್ಘಾನಿಸ್ತಾನ್ ನಲ್ಲಿ ತಾಲಿಬಾನ್ ಉಗ್ರರು ಇಂಟರ್ನೆಟ್ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಿದ್ದಾರೆ. ಹಾಗೂ ಅಲ್ಲಿ ಅತ್ಯಂತ ಚಿಂತದಾಯಕ ಸ್ಥಿತಿಯಲ್ಲಿ ಜನರೆಲ್ಲರು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ, ಅಲ್ಲಿ ವಾಸಿಸುತ್ತಿರುವಂತಹ ಪ್ರತಿಯೊಬ್ಬ ಪ್ರಜೆಗಳಿಗೂ ಭೌತಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ತಾಲಿಬಾನ್ ಗಳು ಹಿಂಸೆಯನ್ನು ನೀಡುತ್ತಿದ್ದಾರೆ ಅಲ್ಲಿ ಯಾವ ಪ್ರಜೆಯು ಸಂತೋಷದಿಚಿದ ಬದುಕುತ್ತಿಲ್ಲ ಅಂತಹ ಸ್ಥಿತಿ ಬಂದಿದೆ ಎಂದು ದುಃಖದಿಂದ ಹೇಳಿದರು.
ಹಾಗೆಯೇ ನನಗೆ ಮುಂದಿನ ತಿಂಗಳು ಅಂತಿಮ ಪರೀಕ್ಷೆ ಯಿದೆ ಎಂದು ನಾನು ಪೋಷಕರಿಗೆ ತಿಳಿಸಿದ್ದೆ. ಅದಕ್ಕೆ ನನ್ನ ಪೋಷಕರು ಇಲ್ಲಿನ ಸ್ಥಿತಿ ಹಾಗೆ ಇದೆ ಇಲ್ಲಿಯ ಬಗ್ಗೆ ನೀನು ಗಮನವನ್ನುಹರಿಸದೆ ನಿನ್ನ ವಿದ್ಯಾಭ್ಯಾಸದ ಕಡೆ ಮಾತ್ರ ಗಮನಹರಿಸು ಎಂದು ನನಗೆ ಹೇಳಿದ್ದಾರೆ ಎಂದು ಬೇಸರದಿಂದ ಹೇಳಿದರು.
ನಂತರ ಸುದ್ದಿಗಾರರಿಗೆ ಪ್ರತಿಯೊಂದು ಮಾಧ್ಯಮದಲ್ಲಿಯೂ ಅಫ್ಘಾನಿಸ್ತಾನ್ ನಲ್ಲಿ ಆಗುತ್ತಿರುವಂತಹ ದೌರ್ಜನ್ಯದ ಬಗ್ಗೆ ಪ್ರಸಾರ ಮಾಡುತ್ತಿರುವುದರಿಂದ ಅಲ್ಲಿಯ ಸ್ಥಿತಿಗತಿಯ ಬಗ್ಗೆ ನನಗೆ ತಿಳಿದಿದೆ ಹಾಗೂ ನಾನು ಅಲ್ಲಿಗೆ ಹೋಗಿ ನನ್ನ ಪೋಷಕರ ಜೊತೆ ಇರಬೇಕು ಎಂದು ಅನಿಸ್ತಾ ಎಂದು ತಿಳಿಸಿದಾಗ ಅಲ್ಲಿಗೆ ಬರಬೇಡ ಇಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಅಂತ ನನ್ನ ತಂದೆ ತಾಯಿ ಹೇಳ್ತಾ ಇದ್ದಾರೆ ಎಂದು ಬೇಸರಗೊಂಡರು.
ಇಡೀ ಭಾರತದಲ್ಲಿ ನನ್ನ ತರಹ ಇಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಅನೇಕ ಮಂದಿ ಅಫ್ಘಾನಿಸ್ತಾನ್ ನಿಂದ ಬಂದಿದ್ದಾರೆ. ನಮಗೆಲ್ಲರಿಗೂ ಈಗಿನ ಪರಿಸ್ಥಿಯಲ್ಲಿ ಅಲ್ಲಿಗೆ ಹೋಗಲು ತುಂಬಾ ಕಷ್ಟಕರವಾದಂತಹ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ಭಾರತ ಸರ್ಕಾರ ಎಲ್ಲಾ ಅಫ್ಘಾನ್ ಮೂಲದ ವಿದ್ಯಾರ್ಥಿಗಳ ವೀಸಾ ದ ಅವಧಿಯನ್ನು ಮುಂದೂಡಲು ನಿರ್ಧಾರ ಮಾಡಿ ನಮಗೆಲ್ಲರಿಗೂ ಸಹಾಯವನ್ನು ಮಾಡಿದೆ ಎಂದು ಮನದಾಳದ ಮಾತನ್ನು ಅಚ್ಚ ಕನ್ನಡದಲ್ಲಿಯೇ ಸುದ್ದಿಗಾರರಿಗೆ ತಿಳಿಸಿದ್ದಾರೆ.