Sunday, October 1, 2023
Homeಮಲೆನಾಡುಚಿಕ್ಕಮಗಳೂರುನಟ ಸಂಪತ್ ಜಯರಾಮ್ ಸಾವಿನ ರಹಸ್ಯ ಬಿಚ್ಚಿಟ್ಟ ಆತ್ಮೀಯ ಸ್ನೇಹಿತ!

ನಟ ಸಂಪತ್ ಜಯರಾಮ್ ಸಾವಿನ ರಹಸ್ಯ ಬಿಚ್ಚಿಟ್ಟ ಆತ್ಮೀಯ ಸ್ನೇಹಿತ!

ಕೊಪ್ಪ/ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಿರುತೆರೆಯ ಜನಪ್ರಿಯ ಧಾರವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ “ಅಗ್ನಿಸಾಕ್ಷಿ” ಧಾರಾವಾಹಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿರುವ ಸಂಪತ್ ಜಯರಾಮ್ (35) ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ; ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್

ಈ ವಿಚಾರವಾಗಿ ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಹಿತ್ತು, ಚಿತ್ರರಂಗದಲ್ಲಿ ಸೂಕ್ತ ಅವಕಾಶ ಸಿಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ, ಫೈನಾನ್ಶಿಯಲ್ ತೊಂದರೆ ಇದ್ದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ, ವೈವಾಹಿಕ ಜೀವನಕದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಇನ್ನು ಹಲವು ಕಾರಣಗಳು ಕೆಲವು ಮಾದ್ಯಮದಲ್ಲಿ ಹಾಗೂ ಯೂಟ್ಯೂಬ್ ಚಾನಲ್ ಗಳಲ್ಲಿ ಪ್ರಸಾರವಾಗಿತ್ತು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಆದರೆ ಇದೀಗ ನಟ ಸಂಪತ್ ಜಯರಾಮ್‌ನ ಆಪ್ತ ಸ್ನೇಹಿತನಾದ ರಾಜೇಶ್ ಧ್ರುವ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಹೌದು ನಟ ಸಂಪತ್ ಜಯರಾಮ್‌ನ ಆಪ್ತ ಸ್ನೇಹಿತನಾದ ರಾಜೇಶ್ ಧ್ರುವ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಸಂಪತ್ ಅದೊಂದು ಯಡವಟ್ಟಿನಿಂದ ತನ್ನ ಪ್ರಾಣವನ್ನೆ ಕಳೆದುಕೊಂಡವರು.

ನಟ ಸಂಪತ್ ಜಯರಾಮ್‌ನ ಕುಟುಂಬ ಹೇಗಿತ್ತು ಗೊತ್ತಾ?:
ಸಂಪತ್ ಜಯರಾಮ್ ಮತ್ತು ಅವರ ಮಡದಿ ಚೈತನ್ಯ 10-12 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು. ಕಳೆದ ಆಗಸ್ಟ್ ತಿಂಗಳಿನಲ್ಲಿ ಮದುವೆಯಾದವರು. ಇದೀಗ ನಟ ಸಂಪತ್ ಜಯರಾಮ್‌ನ ಮಡದಿ ಚೈತನ್ಯ 5 ತಿಂಗಳ ತುಂಬು ಗರ್ಭಿಣಿ. ತುಂಬಾ ಅದ್ಭುತವಾಗಿ ಜೀವನ ಸಾಗಿಸುತ್ತಿದ್ದವರು ಸಂಪತ್ ಜಯರಾಮ್.

ಇದನ್ನೂ ಓದಿ; ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನಟ ಸಂಪತ್ ಜಯರಾಮ್ ಆತ್ಮಹತ್ಯೆಗೆ ಅದೊಂದು ಯಡವಟ್ಟು ತಂದಿತ್ತು;
ನಟ ಸಂಪತ್ ಜಯರಾಮ್ ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮೀಯ ಸ್ನೇಹಿತನಾದ ರಾಜೇಶ್ ಧ್ರುವ ಅವರ ಸಾವಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಸಂಪತ್ ಜಯರಾಮ್ ಮತ್ತು ಚೈತನ್ಯ ನಡುವೆ ಚಿಕ್ಕ ಜವಳವಾಗಿತ್ತು, ಸಂಪತ್ ತಮಾಷೆಗಾಗಿ ಸಾಯುತ್ತಿನಿ ಎಂದು ನೇಣು ಬಿಗಿದುಕೊಂಡಿದ್ದರು. ಅದು ಮಿಸ್ ಆಗಿ ಲಾಕ್ ಆಗಿದೆ. ತಮಾಷೆ ಮಾಡಲು ಹೋಗಿ ಸಂಪತ್ ತನ್ನ ಜೀವವನ್ನೆ ಕಳೆದುಕೊಂಡ ಎಂದು ರಾಜೇಶ್ ಧ್ರುವ ಬೇಸರ ವ್ಯಕ್ತಪಡಿಸಿದರು.

Most Popular

Recent Comments