Sunday, October 1, 2023
Homeಮಲೆನಾಡುಚಿಕ್ಕಮಗಳೂರುಆಲ್ದೂರು: ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

ಆಲ್ದೂರು: ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

ಇದನ್ನೂ ಓದಿ;  ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ

ಬೊಲೆರೋ ವಾಹನದಲ್ಲಿ ಗೋವುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಅರೋಪಿಯನ್ನು ಭಾನುವಾರ ಪುರ ಗ್ರಾಮದ ಬಳಿ ಬಂಧಿಸಲಾಗಿದೆ.

ಹಾಂದಿ ಭೂತನಕಾಡು ನಿವಾಸಿ ಶರತ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಭಾನುವಾರ ವಸ್ತಾರೆ ಗ್ರಾಮದಲ್ಲಿ ಅಲ್ದೂರು ಪೊಲೀಸರು ಜಿಪ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪುರ ಗ್ರಾಮದ ಬಳಿ ವಾಹನ ತಡೆದು ಪರಿಶೀಲಿಸಿದಾಗ 13 ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಕ್ರೂರವಾಗಿ ತುಂಬಿಸಿ ಸಾಗಿಸುತ್ತಿರುವುದು ಕಂಡು ಬಂದಿದೆ.

13 ಹಸುಗಳ ಪೈಕಿ ಎರಡು ಮೃತಪಟ್ಟಿದ್ದವು. ಗೋವುಗಳನ್ನು ಮಾಂಸಕ್ಕಾಗಿ ಸಾಗಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ವಾಹನ ವಶಕ್ಕೆ ಪಡೆದು 11 ಜಾನುವಾರುಗಳನ್ನು ಅರಸೀಕೆರೆಯ ಕಸ್ತೂರಬಾ ಗೋಶಾಲೆಗೆ ಬಿಡಲಾಗಿದೆ.

ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಸಜಿತ್‌ಕುಮಾರ್, ಎಎಸ್‌ಐ ಪರಮೇಶ್ ಗೌಡ, ಸಿಬ್ಬಂದಿ ಚಂದ್ರಪ್ಪ, ಆನಂದ್‌, ಮಹೇಶ್‌, ಶಶಿಧರ್ ಕಾರ್ಯಾಚರಣಿಯಲ್ಲಿ ಇದ್ದರು.

ಇದನ್ನೂ ಓದಿ; ಕಾರು ಹಾಗೂ ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು; ಟವರ್ ಮೇಲೇರಿದ ಬಿಜೆಪಿ ಕಾರ್ಯಕರ್ತ; ವಿಡಿಯೋ ಮಾಡಿ ಹೇಳಿದ್ದೇನು ಗೊತ್ತಾ?

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಇದರ ಮಧ್ಯೆ ಬಿಜೆಪಿ ಕಾರ್ಯಕರ್ತನೊಬ್ಬ ಬಿಎಸ್‌ಎನ್‌ಎಲ್ ಟವರ್ ಮೇಲೇರಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ರಂಗಪ್ಪ ಬೋವಿ ಎನ್ನುವಾತ ಟವರ್ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಟವರ್ ಮೇಲೆ ಕುಳಿತು ವಿಡಿಯೋ ಮಾಡಿರುವ ರಂಗಪ್ಪ ಬೋವಿ, ರಾಜಕೀಯದಿಂದ ನೊಂದು, ಗ್ರಾಮಸ್ಥರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.

ಕಳೆದ 15 ವರ್ಷದಿಂದ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿರುವ ರಂಗಪ್ಪ ಬೋವಿಗೆ ಗ್ರಾಮಸ್ಥರು ಕಿರುಕುಳ ನೀಡುತ್ತಿದ್ದಾರಂತೆ. ಅಲ್ಲದೇ ರಾಜಕೀಯದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಪೊಲೀಸರು ದೌಡಾಯಿಸಿದ್ದು, ಕೆಳಗಿಳಿಯುವಂತೆ ಬೇಡಿಕೊಂಡಿದ್ದಾರೆ. ಆದರೆ, ರಂಗಪ್ಪ ಕೆಳಗೆ ಇಳಿಯಲಿಲ್ಲ ಇದರಿಂದ ಪೊಲೀಸರು, ಗ್ರಾಮಸ್ಥರ ಸುಸ್ತಾಗಿ ಹೋಗಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರಿನ ಕೈ ಟಿಕೆಟ್ ಕೊನೆಗೂ ಫೈನಲ್

Most Popular

Recent Comments