Sunday, December 3, 2023
Homeಮಲೆನಾಡುಚಿಕ್ಕಮಗಳೂರುಕಡೂರು; ವಿವಿಧೆಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಮಾಲುಗಳ ಸಮೇತ ಬಂಧನ

ಕಡೂರು; ವಿವಿಧೆಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಮಾಲುಗಳ ಸಮೇತ ಬಂಧನ

ಕಡೂರು; (ನ್ಯೂಸ್ ಮಲ್ನಾಡ್ ವರದಿ) ವಿವಿಧೆಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾಲುಗಳ ಸಮೇತ ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟೀಗೆರೆ ತಾಲೂಕಿನ ಬಸವನಹಳ್ಳಿಯ ಬಸವರಾಜು ಬಂಧಿತ ಆರೋಪಿ.

ಇದನ್ನೂ ಓದಿ; ಮಹಿಳೆ ಮೇಲೆ ಹುಲಿ ದಾಳಿ; ಗಂಭೀರ ಗಾಯ

ಇದನ್ನೂ ಓದಿ; ಮರಕ್ಕೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ಅಧೀಕ್ಷಕರಾದ ಕೃಷ್ಣಮೂರ್ತಿ, ತರೀಕೆರೆ ಡಿವೈ ಎಸ್ಪಿನಾಗರಾಜ್, ಕಡೂರು ಪೋಲೀಸ್ ವೃತ್ತ ನಿರೀಕ್ಷಕ ವಸಂತರಾವ್ ಆಚಾರ್ಯ ಅವರ ಸಾರಥ್ಯದಲ್ಲಿ ರಚಿಸಿದ ತಂಡದಲ್ಲಿ ಕಡೂರು ಪಿಎಸ್ ಐ ರಮ್ಯಾ ರವರನ್ನು ಒಳಗೊಂಡ ತಂಡವು ತನಿಖೆಯನ್ನು ಕೈಗೊಂಡಿತ್ತು.

ಖಚಿತ ಮಾಹಿತಿ ಮೇರೆಗೆ ಆರೋಪಿ ಬಸವರಾಜನನ್ನು ತುಮಕೂರು ಜಿಲ್ಲೆಯ ಬಸವನಹಳ್ಳಿಯಲ್ಲಿ ವಶಕ್ಕೆ ಪಡೆದು, ವಿವಿಧೆಡೆಗಳಲ್ಲಿ ಕಳ್ಳತನ ಮಾಡಿರುವ ಸುಮಾರು 2,33,382 ರೂ ಮೌಲ್ಯದ ಬಂಗಾರದ ಆಭರಣ ಮತ್ತು ಸುಮಾರು 9 ಸಾವಿರ ರೂ. ಮೌಲ್ಯದ 128 ಗ್ರಾಂ ಬೆಳ್ಳಿ ಸೇರಿ ಒಟ್ಟು 2,42,382 ರು. ಮೌಲ್ಯದ ವಶಪಡಿಸಿಕೊಳ್ಳಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಹಿಂದೆ ಕೊರಟೀಗೆರೆ, ಕ್ಯಾತಸಂದ್ರ, ವಿದ್ಯಾರಣ್ಯಪುರ, ನೆಲಮಂಗಲ, ಮಾದನಾಯ್ಕನ ಹಳ್ಳಿ ನಾಗಮಂಗಲ ಠಾಣೆಗಳಲ್ಲಿ ಆರೋಪಿತನ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದೆ. ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಚಿಕ್ಕಮಗಳೂರು: ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲ ಬೇಕಾಗಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಕ್ರವರ್ತಿ ಸೂಲಿಬೆಲೆ ಅಪ್ರತಿಮ ದೇಶಭಕ್ತ, ಅವರ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದರು.

ಇದನ್ನೂ ಓದಿ;  ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

ಇದನ್ನೂ ಓದಿ;  ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ. ಬಹುಶಃ ಕಾಂಗ್ರೆಸ್ ಅವರ ಕಣ್ಣಿಗೆ ಸೂಲಿಬೆಲೆ ಲಾಡೆನ್ ತರ ಕಾಣ್ತಿದ್ದಾರಾ, ಲಾಡೆನ್ ಬಂದ್ರೆ ಒಳಗೆ ಬಿಟ್ಟುಕೊಳ್ತಾರೆ. ಚಕ್ರವರ್ತಿ ಸೂಲಿಬೆಲೆ ಬಂದ್ರೆ ಏನು, ಕಾಂಗ್ರೆಸ್ಸಿಗರಿಗೆ ಅಧಿಕಾರದ ಮದ ಅತಿಯಾಗಿದೆ ಎಂದು ಕಾಣಿಸುತ್ತದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ;  ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ

ಅಧಿಕಾರದ ಅತಿಯಾದ ಮದ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಈ ಹಿಂದೆ ಕಾಂಗ್ರೆಸ್ ಸಂವಿಧಾನವನ್ನೇ ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿತ್ತು. ಜನ ಈ ಹಿಂದೆ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಿದ್ದನ್ನ ಅವರು ನೆನಪಿಟ್ಟುಕೊಳ್ಳಬೇಕು ಎಂದು ಸಿ.ಟಿ ರವಿ ಹೇಳಿದರು

ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲಬೇಕಾಗಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ; ಲಾರಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು

Most Popular

Recent Comments