ವಿರಾಜಪೇಟೆ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಬಣ್ಣದ ಅಂಗಡಿಯೊಂದರಲ್ಲಿ ಸೋಮವಾರ ನಸುಕಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಬಣ್ಣ ಹಾಗೂ ಇತರೆ ಪರಿಕರಗಳು ಭಸ್ಮವಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.
ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ
ಗೋಣಿಕೊಪ್ಪಲು ರಸ್ತೆಯ “ನಂದಿ ಬಣ್ಣದ ಅಂಗಡಿ”ಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ಪಡೆ ಸ್ಥಳಕ್ಕೆ ಬಂದು ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ಹರಡುವುದನ್ನು ತಪ್ಪಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ
- ಸಿ.ಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್ನ ತಮ್ಮಯ್ಯ
- ಚುನಾವಣೆಯಲ್ಲಿ ಸೋತ ಸಿ.ಟಿ ರವಿಗೆ ಧೈರ್ಯ ತುಂಬಿದ ಬಾಲಕ
ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಉರಗ ಸಂರಕ್ಷಕ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸ್ನೇಕ್ ಕಿರಣ್ ಹಾವು ಕಡಿತಕ್ಕೆ ಒಳಗಾದವರು.
ನಗರದ ಹೊರಭಾಗವಾಗಿರುವ ತಾವರೆ ಚಟ್ನಹಳ್ಳಿಯಲ್ಲಿ ಹಾವು ಬಂದಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಹಾವು ಹಿಡಿಯಲು ಸ್ನೇಕ್ ಕಿರಣ್ ಮುಂದಾಗಿದ್ದಾರೆ. ಹಾವು ಹಿಡಿಯಲು ಮುಂದಾದಾಗ ಪೊದೆ ಒಳಗೆ ನುಗ್ಗಿದೆ.
ಇದನ್ನೂ ಓದಿ; ಭೀಕರ ಅಪಘಾತ, ಅತ್ತೆ-ಸೊಸೆ ಸಾವು
ಸ್ನೇಕ್ ಕಿರಣ್ ಶೂ ಹಾಕದೆ ಬಂದಿದ್ದೂ, ಕಾಲಿಗೆ ಸರಿಯಾಗಿ ಕೊಳಕಮಂಡಲ ಹಾವು ಕಚ್ಚಿದೆ. ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.