Saturday, December 9, 2023
Homeಕ್ರೈಂ ನ್ಯೂಸ್ಚಿಕ್ಕಮಗಳೂರು: ಯುಗಾದಿ ಹಬ್ಬದಂದೇ ಇಬ್ಬರನ್ನು ಬಲಿ ಪಡೆದ ಭೀಕರ ಅಪಘಾತ

ಚಿಕ್ಕಮಗಳೂರು: ಯುಗಾದಿ ಹಬ್ಬದಂದೇ ಇಬ್ಬರನ್ನು ಬಲಿ ಪಡೆದ ಭೀಕರ ಅಪಘಾತ

ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ) ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿನ ಘಟನೆ ಚಿಕ್ಕಮಗಳೂರಿನ ಎಪಿಎಂಸಿ ಬಳಿ ನಡೆದಿದೆ.

ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಮಗಳೂರಿನಿಂದ ಕಡೂರು ಕಡೆ ತೆರಳುತ್ತಿದ್ದ ಬಸ್ ನಗರದ ಎಪಿಎಂಸಿ ಬಳಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸಾವನ್ನಪ್ಪಿದವರನ್ನು ಜಾವಗಲ್ ಮೂಲದ ಶ್ರೀಧರ್ (24) ಚಿಕ್ಕಮಗಳೂರಿನ ದಂಟರಮಕ್ಕಿ ಸಮೀಪದ ದಯಾನಂದ್ (30) ಎಂದು ಗುರುತಿಸಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Popular

Recent Comments