Friday, June 9, 2023
Homeಇತರೆಕಾರ್ಮಿಕ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ : ದಾಖಲೆ ಇಲ್ಲದ ರೂ.1.54 ಲಕ್ಷ ವಶ

ಕಾರ್ಮಿಕ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ : ದಾಖಲೆ ಇಲ್ಲದ ರೂ.1.54 ಲಕ್ಷ ವಶ

ಬೆಂಗಳೂರು: ಕಾರ್ಮಿಕ ಇಲಾಖೆಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ದಾಳಿಯನ್ನು ನಡೆಸಿದ್ದು, ದಾಳಿಯ ಸಮಯದಲ್ಲಿ ದಾಖಲೆ ಇಲ್ಲದೇ ಇರುವಂತಹ ರೂ.1.54 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಲಾಖೆಯ ಸಿಬ್ಬಂದಿ ಕಾರ್ಮಿಕ ಏಜೆನ್ಸಿಗಳಿಂದ ಲಂಚವನ್ನು ಪಡೆಯುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಡೇರಿ ಸರ್ಕಲ್ ಬಳಿಯ ಕಾರ್ಮಿಕ ಇಲಾಖೆ ಕಚೇರಿಯ ಮೇಲೆ ಎಸಿಬಿ ದಾಳಿಯನ್ನು ನಡೆಸಿದ್ದಾರೆ.

ಇಲಾಖೆ ಕಾರ್ಮಿಕರ ಪಿಎಫ್, ಗ್ರ‍್ಯಾಚ್ಯುವಿಟಿ ಸೇರಿದಂತೆ ಮುಂತಾದ ಸೌಲಭ್ಯಗಳ ಬಗ್ಗೆ ಪರಿಶೀಲನೆಯನ್ನು ಮಾಡಬೇಕು. ಆದರೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದಲ್ಲಿ ಕ್ರಮವನ್ನು ಜರುಗಿಸದೆ ಅಕ್ರಮ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದರು ಎಂಬ ಆರೋಪವು ಕೇಳಿಬಂದಿದೆ. ಈ ಸಂಬoಧ ಇದೀಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿಯ ನಂತರ ತನಿಖೆಯನ್ನು ಮುಂದುವರೆಸಿದ್ದಾರೆ.

ಮoಗಳವಾರ ಮಧ್ಯಾಹ್ನ 2 ಗಂಟೆಗೆ ಎಸಿಬಿ ಅಧಿಕಾರಿಗಳು ಕಚೇರಿಯ ಮೇಲೆ ದಾಳಿಯನ್ನು ನಡೆಸಿದ್ದು, ತಡರಾತ್ರಿವರೆಗೂ ಪರಿಶೀಲನೆಯನ್ನು ನಡೆಸಿದ್ದಾರೆಂದು ತಿಳಿದುಬಂದಿದೆ ದಾಳಿಯ ಸಮಯದಲ್ಲಿ ದಾಖಲೆ ಇಲ್ಲದೇ ಇರುವಂತಹ ರೂ.2.54 ನಗದು ಪತ್ತೆಯಾಗಿದ್ದು, ಈ ಕುರಿತು ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳು ಮಾಹಿತಿಯನ್ನು ನೀಡಿದೆ.

Most Popular

Recent Comments