ಕಲಬುರಗಿ: ಲೋಕೋಪಯೋಗಿ ಅಧಿಕಾರಿ PWD ಶಾಂತಗೌಡ ಅವರ ಮನೆಯಲ್ಲಿರುವ ಬಾತ್ ರೂಮ್ ಮತ್ತು ವಾಶ್ ಬೇಷನ್ ನ್ನಿನ ಪೈಪ್ ನಲ್ಲಿ ಅಡಗಿಸಿಟ್ಟಿದ್ದ ದುಡ್ಡಿನ ಕಂತೆಯನ್ನು ಎಸಿಬಿ ಅಧಿಕಾರಿಗಳು ವಶ ಪಡೆಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಶಾಂತಗೌಡ ರವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಲು ಬರುತ್ತಿದ್ದಂತೆ ಶಾಂತಗೌಡ ಮತ್ತು ಆತನ ಮಗ ಹಣದ ಕಂತನ್ನು ಬಾತ್ ರೂಮಿನ ಹಾಗೂ ವಾಶ್ ಬೇಶನ್ನಿನ ಪೈಪ್ ನಲ್ಲಿ ಹಣವನ್ನು ಹಾಕಿದ್ದರು. ಈ ಪೈಪ್ ಗಳಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
PWD ಅಧಿಕಾರಿಗೆ ಬರುವ ಹಣಕ್ಕಿಂತ ಜಾಸ್ತಿ ಆಸ್ತಿಯನ್ನು ಹೊಂದಿರುವ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ಜೆ. ಇ ಶಾಂತಗೌಡ ಬಿರಾದಾರ್ ಮನೆ ಮೇಕೆ ದಾಳಿಯನ್ನು ನಡೆಸಿದ ಅಧಿಕಾರಿಗಳು ಅವರ ಮನೆ ಹಾಗೂ ತೋಟದ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅನೇಕ ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವಂತಹ ಮೂರು ಅಂತಸ್ತಿನ ಭವ್ಯ ಬಂಗಲೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು ಮತ್ತು ಮೂರು ಮನೆಗಳು, ವಿವಿ ರಸ್ತೆಯಲ್ಲಿ 2 ನಿವೇಶನ ಅದಲ್ಲದೆ ಬೆಂಗಳೂರಿನಲ್ಲಿ ಸಹ ಆಸ್ತಿ ಇರುವ ಮಾಹಿತಿ ದೊರೆತಿದ್ದು ಎರಡು ಕಾರು ಮತ್ತು ಎರಡು ಬೈಕ್ ದೊರೆತಿದೆ.