ಮಂಡ್ಯ: ಅಂಬಿ ಕಾಯಕ ಪ್ರಶಸ್ತಿ ಪಡೆಯಲು ಇಂಜಿನಿಯರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಿನ್ನೆ ನಡೆಸಿದ ದಾಳಿ ಇಂದು ಕೂಡ ಮುಂದುವರೆದಿದೆ.
ಕೆ ಆರ್ ಪೇಟೆಯ HLBC ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್ ಕೆ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ಮೈಸೂರಿನ ನಿವಾಸ, ನಂಜನಗೂಡಿನ ಫಾರಂ ಹೌಸ್ ಹಾಗೂ ಕೆಆರ್ ಪೇಟೆ ಕಚೇರಿ ಮೇಲೆ ಏಕಾಏಕಿ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿ ಪರಿಶೀಲನೆ ನಡೆಸಿದ್ದರು. ದಾಳಿಯ ವೇಳೆ ಅಪಾರ ಮಟ್ಟದ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ ಕಡತಗಳು ಪತ್ತೆಯಾಗಿವೆ.
ಇಂದು ಕೂಡ ದಾಳಿಯನ್ನು ಮುಂದುವರೆಸಿದ ಅಧಿಕಾರಿಗಳು ಶ್ರೀನಿವಾಸ್ ಕೆನರಾ ಬ್ಯಾಂಕ್ ನಲ್ಲಿ ಎರಡು ಲಾಕರ್ ಹೊಂದಿರುವ ಕಾರಣದಿಂದ ಮೈಸೂರಿನ ಕೆನರಾ ಬ್ಯಾಂಕ್ ವೊಂದರಲ್ಲಿ ಇರುವ ಲಾಕರ್ ನನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ರೂ. 9.85 ಲಕ್ಷ ನಗದು, 1ಕೆ.ಜಿ ಚಿನ್ನ, 8ಕೆ.ಜಿ ಬೆಳ್ಳಿ ಪತ್ತೆಯಾಗಿದೆ.
ಮೈಸೂರು ನಗರದಲ್ಲಿ 1 ಮನೆ, 1 ಫ್ಲಾಟ್, 2 ಸೈಟ್, 4 ಎಕರೆ 34 ಗುಂಟೆ ಜಮೀನು, ನಂಜನಗೂಡಿನಲ್ಲಿ ಫಾರಂ ಹೌಸ್, ವಿವಿಧ ಬ್ಯಾಂಕ್ ಗಳಲ್ಲಿ ರೂ. 22ಲಕ್ಷ ಮೌಲ್ಯದ ಠೇವಣಿ ಪತ್ತೆಯಾಗಿತ್ತು
ಈ ಅಧಿಕಾರಿಗೆ ಅಂಬಿ ಕಾಯಕ ಪ್ರಶಸ್ತಿ ಸ್ವೀಕಾರ ಮಾಡುವ ದಿನವೇ ಎಸಿಬಿ ದಾಳಿ ನಡೆಸಿದ್ದಾರೆ. ನಿನ್ನೆ ಮಂಡ್ಯದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದಿಂದ ಈ ಕಾರ್ಯಕ್ರಮವನ್ನು ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಹತ್ತು ಜನರಿಗೆ ಅಂಬಿ ಕಾಯಕ ಪ್ರಶಸ್ತಿ ನೀಡಲಾಗಿತ್ತು ಹತ್ತು ಜನರಲ್ಲಿ ಕೆಆರ್ ಪೇಟೆಯಲ್ಲಿ ಇಂಜಿನಿಯರ್ ಆಗಿರುವ ಕೆ.ಶ್ರೀನಿವಾಸ ಕೂಡ ಒಬ್ಬರಾಗಿದ್ದರು. ಎಸಿಬಿ ದಾಳಿ ನಡೆದ ಹಿನ್ನಲೆ ಕಾರ್ಯಕ್ರಮಕ್ಕೆ ಶ್ರೀನಿವಾಸ ಗೈರಾಗಿದ್ದರು.