Monday, December 11, 2023
Homeಇತರೆಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ತಾಲ್ಲೂಕು ಆರೋಗ್ಯಾಧಿಕಾರಿ

ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ತಾಲ್ಲೂಕು ಆರೋಗ್ಯಾಧಿಕಾರಿ

ಮಡಿಕೇರಿ: ತಾಲ್ಲೂಕು ಆರೋಗ್ಯಾಧಿಕಾರಿಯೊಬ್ಬರು ಲಂಚವನ್ನು ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥ್ ಶಿಂಪಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವಿರಾಜಪೇಟೆಯ ನಿವಾಸಿ ಸೂರ್ಯ ಎಂಬುವವರಿಗೆ ಅಪೆಂಡಿಸೈಟಿಸ್ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆ ನಡೆಸಲು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಖಚಿತಗೊಂಡ ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವುದಕ್ಕಾಗಿ ಡಾ. ವಿಶ್ವನಾಥ್ ಶಿಂಪಿ 6000 ಹಣವನ್ನು ಕೇಳಿದ್ದರು. ನಂತರ 5000 ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿದ್ದರು. ನವೆಂಬರ್ 29 ರಂದು ಶಸ್ತ್ರಚಿಕಿತ್ಸೆ ಮಾಡಿದ್ದು ಸೂರ್ಯ ಗೂಗಲ್ ಪೇ ಮುಖಾಂತರ 3000 ರೂಪಾಯಿಯನ್ನು ವರ್ಗಾಯಿಸಿದ್ದರು.

ಘಟನೆಯ ನಂತರ ಸೂರ್ಯ ಅವರ ಪತ್ನಿ ಲಲಿತ ಎಸಿಬಿ ಕಚೇರಿಗೆ ತೆರಳಿ ಲಂಚವನ್ನು ಪಡೆದಿರುವ ವೈದ್ಯರ ವಿರುದ್ಧ ದೂರನ್ನು ನೀಡಿದ್ದರು. ಅನಂತರ ಎಸಿಬಿ ಅಧಿಕಾರಿಗಳು ಆರೋಪಿಯನ್ನು. ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆಯನ್ನು ಬೀಸಿದರು.

ಗುರುವಾರ ಸೂರ್ಯ ಆಸ್ಪತ್ರೆಗೆ ತೆರಳಿ ಬಾಕಿ ಉಳಿದ 2000 ರೂಪಾಯಿಗಳನ್ನು ಹಣವನ್ನು ನೀಡಬೇಕಾದರೆ. ಎಸಿಬಿ ಅಧಿಕಾರಿಗಳು ವೈದ್ಯ ವಿಶ್ವನಾಥ್ ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದ್ದಾರೆ.

Most Popular

Recent Comments