Wednesday, November 29, 2023
Homeಇತರೆರಾಷ್ಟ್ರಪತಿ ಭವನದಲ್ಲಿ ವೀರ ಪ್ರಶಸ್ತಿ ಸ್ವೀಕರಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ರಾಷ್ಟ್ರಪತಿ ಭವನದಲ್ಲಿ ವೀರ ಪ್ರಶಸ್ತಿ ಸ್ವೀಕರಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್, ಹಾಲಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ರವರು ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾದರು.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಹೂಡಿಕೆ, ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಅಭಿನಂದನ್ ವರ್ಧಮಾನ್ ರವರಿಗೆ ವೀರಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

2019 ಫೆಬ್ರವರಿ 27ರಂದು ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ್ದರು.

2019 ಫೆಬ್ರವರಿಯಲ್ಲಿ ನಡೆದಂತಹ ಬಾಲಾಕೋಟ್ ವಾಯುದಾಳಿ ನಡೆಯುವ ಸಂದರ್ಭದಲ್ಲಿ ಅಂದಿನ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಪಾಕಿಸ್ತಾನದ ಕಾಶ್ಮೀರದ ಮೇಲೆ ಹಾರಿದ ಸಮಯದಲ್ಲಿ ಅವರು ಇದ್ದಂತಹ ಮಿಗ್-21 ಗೆ ಹೊಡೆತ ಬಿದ್ದಿತು. ಅಲ್ಲಿದ್ದಂತಹ ಪಾಕಿಸ್ತಾನದ ಸೇನೆ ಅಭಿನಂದನ್ ರನ್ನು ವಶಕ್ಕೆ ಪಡೆದುಕೊಂಡಿತ್ತು. ಅನಂತರ ಅಂತರಾಷ್ಟೀಯ ಹಸ್ತಕ್ಷೇಪದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿಕೊಟ್ಟಿತು.

ಇತ್ತೀಚಿಗೆ ಅಭಿನಂದನ್ ವರ್ಧಮಾನ್ ರವರು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ.

Most Popular

Recent Comments