ಕಡೂರು: (ನ್ಯೂಸ್ ಮಲ್ನಾಡ್ ವರದಿ) ಸಾಲಬಾಧೆಯಿಂದ ಬೇಸತ್ತು ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಪಿ.ಎಂ.ಲವ (28) ಮೃತ ಪಟ್ಟ ಯುವಕ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು
ಇದನ್ನೂ ಓದಿ; ಈಜುಕೊಳದಲ್ಲಿ ಆಟವಾಡಲು ಹೋಗಿ 12 ವರ್ಷದ ಬಾಲಕಿ ಸಾವು
ಬಂಡಿಕೊಪ್ಪಲು ಗ್ರಾಮದ ಗೇಟ್ ಬಳಿ ಭಾನುವಾರ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಂಚೆ ಹೊಸಳ್ಳಿ ಗ್ರಾಮದ ಪಿ.ಎಂ.ಲವ ಜಮೀನಿನ ಅಭಿವೃದ್ಧಿಗೆ ಕೈ ಸಾಲ ಮಾಡಿದ್ದಾನೆ ಎನ್ನಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹಾಲಿ ಶಾಸಕನಿಗೆ ಬಹಿರಂಗ ಪತ್ರ ಬರೆದ ಮಾಜಿ ಶಾಸಕ
- ಮಾಜಿ ಶಾಸಕರ ಮನೆ ದರೋಡೆ ಪ್ರಕರಣ; ಮತ್ತೆ ನಾಲ್ವರು ಅರೆಸ್ಟ್
- ಕೆರೆ ಪಾಲಾದ ಇಬ್ಬರು ಬಾಲಕರು
ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಬೀರೂರು ರೈಲ್ವೆ ಪೊಲೀಸ್ ಠಾಣೆ ಎಎಸ್‌ಐ ನವೀನ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ
ಚಿಕ್ಕಮಗಳೂರು: ಅನುದಾನಕ್ಕೆ ಬ್ರೇಕ್, ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿರುವ ವರದಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ; ಪೆಟ್ರೋಲ್ ತುಂಬಿಸುವಾಗಲೇ ಬ್ಯಾಟರಿ ಸ್ಪೋಟ
ಅನುದಾನಕ್ಕೆ ಬ್ರೇಕ್ ಹಾಕಿರುವ ಕಾರಣದಿಂದಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಇದನ್ನೂ ಓದಿ; ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?
ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಡೆ ಹಿಡಿದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ತಾಲ್ಲೂಕು ಕಛೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನಾ ಮೆರವಣಿಗೆ ಮಾಡಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.