Sunday, September 24, 2023
Homeಮಲೆನಾಡುಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು

ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಒಂದೂವರೆ ವರ್ಷದ ಮಗುವಿಗೆ ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಸಮೀಪದ ಹೊರಬೈಲು ಗ್ರಾಮದಲ್ಲಿ ನಡೆದಿದೆ. ದವ್ಯಕ್ಷ (1.5) ಮೃತಪಟ್ಟ ಮಗು.

ಇದನ್ನು ಓದಿ: ಬಿಜೆಪಿ ಅಭ್ಯರ್ಥಿಯಾಗಿ ದೀಪಕ್ ದೊಡ್ಡಯ್ಯ ಕಣಕ್ಕೆ

ಹೊರಬೈಲು ಗ್ರಾಮದ ಆದರ್ಶ ಅಪೂರ್ವ ದಂಪತಿಯ ಮಗು ದವ್ಯಕ್ಷ.

ಮಗುವೊಂದಿಗೆ ಆಟವಾಗುತ್ತಿದ್ದ ತಂದೆ ಅಜ್ಜಿಯ ಬಳಿ ಬಿಟ್ಟು, ನಿಲ್ಲಿಸಿದ್ದ ಟ್ರ‍್ಯಾಕ್ಟರ್ ಅನ್ನು ರಿವರ್ಸ್ ತೆಗೆದಿದ್ದಾರೆ. ಇದೇ ವೇಳೆ ಓಡಿಬಂದ ಮಗು ಎಡವಿದ್ದರಿಂದ ಟ್ರ‍್ಯಾಕ್ಟರ್‌ನ ಡಾಬರ್ ರಾಡ್ ಹಣೆಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದೆ.

ಇದನ್ನು ಓದಿ: ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ ಪಿ ಕುಮಾರಸ್ವಾಮಿ

ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ ಪಿ ಕುಮಾರಸ್ವಾಮಿ

ಮೂಡಿಗೆರೆ:  ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ಎಂ ಪಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ನಿನ್ನೆ ರಾತ್ರಿ ಬಿಜೆಪಿ ತನ್ನ ಎರಡನೇ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ ಎಸ್ ಸಿ ಮೀಸಲು ಕ್ಷೇತ್ರಕ್ಕೆ ದೀಪಕ್ ದೊಡ್ಡಯ್ಯ ಹೆಸರು ಘೋಷಣೆ ಮಾಡಿತ್ತು.

ಜಿಲ್ಲೆಯಲ್ಲೇ ಅಲ್ಲದೇ ರಾಜ್ಯಮಟ್ಟದಲ್ಲೇ ಅತ್ಯಂತ ಹೆಚ್ಚು ಸುದ್ದಿ ಮಾಡಿದ್ದ ಮೂಡಿಗೆರೆ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ನಿರೀಕ್ಷೆಯಂತೆ ಬಿಜೆಪಿ ಹಾಲಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿತ್ತು. ಈ ಮೂಲಕ ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸಾಭೀತುಪಡಿಸಿದಂತಾಗಿದೆ. ಶಾಸಕ ಎಂಪಿಕೆಗೆ ಟಿಕೆಟ್ ನೀಡಬಾರದೆಂದು ಪಕ್ಷದ ಕಾರ್ಯಕರ್ತರೇ ಪಟ್ಟು ಹಿಡಿದಿದ್ದರು.

ಇದೀಗ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ನಿನ್ನೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ‘ಆತ್ಮೀಯ ಕ್ಷೇತ್ರದ ಮತದಾರ ಬಂಧುಗಳೇ..
ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್ ಗೇ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ ….!!?
ಸರ್ವೇ ಆಧರಿಸಿ ಟಿಕೇಟ್ ನೀಡುವ ಪಕ್ಷ ಪ್ರತಿ ಸರ್ವೆಯಲ್ಲಿ ಮುನ್ನಡೆಯಿದ್ದರು, ಟಿಕೇಟ್ ನಿರಾಕರಿಸಿದ್ದು ನೋವಿನ ವಿಚಾರ…
#ಮಳೆಯಿಂದಾಗಿಬೆಳೆಕಳೆದುಕೊಂಡಕ್ಷೇತ್ರದರೈತಭಾಂದವರಿಗೋಸ್ಕರವಿಧಾನಸೌಧದಗಾಂಧಿಪ್ರತಿಮೆಮುಂದೆ ಏಕಾಂಗಿಯಾಗಿಧರಣಿ_ಕುಳಿತಿದ್ದು ಹೈಕಾಮಾಂಡ್ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ….!!
ನಿಮಗೆಲ್ಲಾ ತಳಿದಿರುವಂತೆ ಶತ್ರುಗಳಿಗೂ ಕೂಡ ಕೇಡು ಬಯಸದೇ ಎಲ್ಲರನ್ನ ಸದಾ ಗೌರವಿಸುತ್ತಾ ಪ್ರೀತಿಯಿಂದ ಕಾಣುತ್ತಲೇ ಬಂದೆ..
ಪಕ್ಷದ ಕಾರ್ಯಕರ್ತರನ್ನ ಬೆಳೆಸಿದ್ದೇನೆ ಹೊರತು ನನ್ನ ಮನೆಯವರನ್ನಲ್ಲಾ..
ಯೋಚಿಸುವ ಶಕ್ತಿ ನಿಮ್ಮಲ್ಲಿದೆ
ನನಗೆ ಶಕ್ತಿ ತುಂಬುವ ಕೈಗಳು ನೀವು.. ಇನ್ನು ಮುಂದೆಯೂ ನಿಮ್ಮೊಂದಿಗೆ ಸದಾ ಜೊತೆಯಲ್ಲಿರುತ್ತೇನೆ ..
ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಬರೆದುಕೊಂಡಿದ್ದರು.

ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಚದಿಂದ 3ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದರು. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಇರುವ ಕುಮಾರಸ್ವಾಮಿಗೆ ಯಡಿಯೂರಪ್ಪ ನೀಡಿದ 19 ಜನರ ಪಟ್ಟಿಯಲ್ಲಿ ಇವರ ಹೆಸರೂ ಇತ್ತು. ಪ್ರಭಲ ಆಕಾಂಕ್ಷಿಗಳಾಗಿದ್ದ ದೀಪಕ್ ದೊಡ್ಡಯ್ಯ, ವಿಜಯ ಕುಮಾರ್, ಹೆಸರು ಹೈಕಮಾಂಡ್ ಮುಂದೆ ಹೋಗಿತ್ತು. ಇದೀಗ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ದೀಪಕ್ ದೊಡ್ಡಯ್ಯ ಅವರ ಹೆಸರು ಘೋಷಿಸಿದೆ.

ಮೂಡಿಗೆರೆಯಲ್ಲಿ ಕಾಂಗ್ರೆಸ್ ನಿಂದ ಬಹುತೇಕ ನಯನ ಮೋಟಮ್ಮ ಅವರಿಗೆ ಟಿಕೆಟ್ ಫೈನಲ್ ಆಗಿದೆ ಇನ್ನು ಜೆಡಿಎಸ್ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲೇ ಮೂಡಿಗೆರೆ ಮಾಜಿ ಶಾಸಕ ಬಿ ಬಿ ನಿಂಗಯ್ಯ ಅವರ ಹೆಸರಿತ್ತು. ಈ ಬಾರಿ ಮೂಡಿಗೆರೆಯಲ್ಲಿ ಜಿದ್ದಾಜಿದ್ದು ಏರ್ಪಡುವ ಸಾಧ್ಯತೆ ಹೆಚ್ಚಿದೆ.

Most Popular

Recent Comments