ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಲ್ಲಿ ವಿಷ್ಣುಸೇನಾ ಚಿತ್ರದ ಪಾರ್ಟ್ 2 ಸನ್ನಿವೇಶ ನಡೆದಿದೆ. ಮದ್ಯ ಸೇವಿಸಿ ಆಪರೇಷನ್ ಮಾಡಲು ಬಂದಿದ್ದ ವೈದ್ಯ ಟೈಟಾಗಿ ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಇದನ್ನೂ ಓದಿ; ಸ್ನೇಕ್ ನರೇಶ್ ಮನೆಯಲ್ಲಿ ರಾಶಿ ರಾಶಿ ನಾಗರಹಾವು ಪತ್ತೆ
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು, ಸುಮಾರು 10ಕ್ಕೂ ಹೆಚ್ಚು ಮಹಿಳೆಯರನ್ನು 8 ಗಂಟೆಗೆ ಬರಲು ಹೇಳಿದ್ದರು. ಆದರೆ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಅಲಿಯಾಸ್ ಎಣ್ಣೆ ಡಾಕ್ಟರ್ ಬರುವಾಗಲೇ ಫುಲ್ ಚಿತ್ತಾಲ್-ಪತ್ತಾಲ್ ಆಗಿ ಬಂದಿದ್ದಾರೆ.
ಇದನ್ನೂ ಓದಿ; ಸಿಡಿಲು ಬಡಿದು ಮಹಿಳೆ ಸಾವು
ಈ ವಿಚಾರವನ್ನು ಮರೆಮಾಚುವ ಸಲುವಾಗಿ ವೈದ್ಯರಿಗೆ ಏನೋ ಆಗಿದೆ, ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ ಅಂತ ಹೈ ಡ್ರಾಮಾ ಸೃಷ್ಟಿ ಮಾಡಿ ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ಕಳಸ ಆಸ್ಪತ್ರೆಯಿಂದ ಕೊಪ್ಪಕ್ಕೆ ವಾಪಸ್ ಕಳಿಸಿದ್ದಾರೆ.
ಇನ್ನು ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಗಳು ಫುಲ್ ರೆಬಲ್ ಆಗಿದ್ದಾರೆ, ಇಂದು ಮತ್ತೆ ಬೇರೆ ವೈದ್ಯರನ್ನ ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ
- ಸಾಲಬಾಧೆಯಿಂದ ಬೇಸತ್ತ ಯುವಕರೈಲಿಗೆ ತಲೆಕೊಟ್ಟು ಆತ್ಮಹತ್ಯೆ
- ಸರಕು ಸಾಗಣೆ ವಾಹನ ಮತ್ತು ಸ್ಕೂಟರ್ ಮಧ್ಯೆ ಅಪಘಾತ; ಸ್ಕೂಟರ್ ಸವಾರ ಸಾವು
ಡಾ. ಬಾಲಕೃಷ್ಣ ವಿರುದ್ಧ ಈ ಹಿಂದೆಯಿಂದಲೂ ಹಲವು ಆರೋಪಗಳು ಕೇಳಿ ಬಂದಿದ್ದವು. ಶೃಂಗೇರಿ, ಕೊಪ್ಪ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಇದೇ ರೀತಿ ಟೈಟಾಗಿ ಬಂದು ಹಲವರ ಜೀವಕ್ಕೆ ಕುತ್ತು ತಂದಿರೋ ಆರೋಪ ಈತನ ಮೇಲಿದೆ. ಒಟ್ಟಿನಲ್ಲಿ ಇಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರ ಈ ಕುರಿತು ಎಚ್ಚೆತ್ತುಕೊಂಡು ಸೂಕ್ತ ವೈದ್ಯರ ನೇಮಕ ಮಾಡಬೇಕಿದೆ.
ಈ ಕುರಿತು ಡಿ.ಹೆಚ್.ಒ ಉಮೇಶ್ ಅವರು ಪ್ರತಿಕ್ರಿಯಿಸಿದ ಅವರು, ನನಿಗೆ ಬಂದ ಮಾಹಿತಿ ಪ್ರಕಾರ ಅನಸ್ತೇಶಿಯಾ ವೈದ್ಯರು ಏನಿದರೆ ಅವರ ಆರೋಗ್ಯ ಸರಿ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬೇರೆ ಕಡೆ ಕಳುಹಿಸಿಕೊಡಲಾಗಿದೆ. ಇದರ ಬಗ್ಗೆ ತನಿಖೆ ಮಾಡುತ್ತೇನೆ, ಎಲ್ಲಾದರು ಮಧ್ಯಪಾನ ಮಾಡಿ ಬಂದಿದ್ದೆ ಆದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ವೈದ್ಯರನ್ನು ಕರೆಸಿ ಕ್ಯಾಂಪ್ ಮುಂದುವರೆಸಲಾಗಿದೆ ಎಂದರು.
ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ: ಎಲ್ಲೆಲ್ಲಿ ಏನೇನು?
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಮೂಲಕ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ ಹಲವೆಡೆ ಬೆಳೆಗಳು ನಾಶವಾಗಿದೆ, ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲವೆಡೆ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬೇಲೂರು, ಚೀಕನಹಳ್ಳಿ, ಮೂಡಿಗೆರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತು ಮೂರು ಟ್ರಾನ್ಸ್ ಫಾರ್ಮ ಗಳು ಹಾಳಾಗಿವೆ. ಮತ್ತೊಂದೆಡೆ ಕೋನರ್ಲು ಗ್ರಾಮದಲ್ಲಿ ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಮೇಲ್ನಾವಣಿ ಹಾರಿ ಹೋಗಿದೆ. ಇನ್ನು ಭಾರಿ ಮಳೆಯಿಂದ ಟ್ರಾನ್ಸ್ಫಾರ್ಮ ಗಳು ಹಾಳಾದ ಹಿನ್ನೆಲೆ ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಬೇಲೂರು ತಾಲೂಕಿನ, ಬಳ್ಳೂರು ಗ್ರಾಮದಲ್ಲಿ ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ನೂರಾರು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಕಾಂಗಾಲಾಗಿದ್ದಾರೆ. ಅಲ್ಲದೆ ಗಾಳಿ, ಮಳೆಯಿಂದ ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ