Sunday, December 3, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ನಾಯಿ ನುಂಗಿ ನರಳುತ್ತಿದ್ದ15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ

ಚಿಕ್ಕಮಗಳೂರು: ನಾಯಿ ನುಂಗಿ ನರಳುತ್ತಿದ್ದ15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿದ್ದ 15 ಅಡಿ ಉದ್ದದ ಹಾಗೂ 60 ಕೆ.ಜಿ. ತೂಕವಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ; ಶೃಂಗೇರಿ: ರಿಜಿಸ್ಟ್ರೇಷನ್ ನಂಬರ್ ಇಲ್ಲದ ಕಾರ್ ನಲ್ಲಿ ಬಂದ್ರು.. 3000 ರೂ. ಪೆಟ್ರೋಲ್ ಹಾಕಿಸಿ ಹಣ ಕೊಡದೆ ಪರಾರಿಯಾದ್ರು!

ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಪಕ್ಕದಲ್ಲಿ ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿದ್ದ ಹೆಬ್ಬಾವನ್ನು ಉರಗ ಸ್ನೇಹಿ ಹರೀಂದ್ರ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಅರಣ್ಯ ಅಧಿಕಾರಿ ರಾಘವೇಂದ್ರ ಸಮ್ಮುಖದಲ್ಲಿ ಈ ಹೆಬ್ಬಾವು ರಕ್ಷಣಾ ಕಾರ್ಯ ನಡೆದಿದ್ದು, ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

ಮೂಡಿಗೆರೆ: ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಡ್ರೈವರ್ ಗಳ ಕಾಲಿಗೆ ತೀವ್ರ ಗಾಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಸರ್ಕಾರಿ ಬಸ್ಸುಗಳ ನಡೆವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಈ ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ. 2019 ರಲ್ಲಿ ಕುಸಿದಿದ್ದ ಕಾಮಗಾರಿ ಇನ್ನೂ ಮುಗಿಯದೇ ಇರದ ಕಾರಣ ಈ ಅಪಘಾತ ಸಂಭವಿಸಿದ್ದು, ಚಾರ್ಮಾಡಿಯಲ್ಲಿ ರಸ್ತೆ ಕಾಮಗಾರಿಯನ್ನ ಕೂಡಲೇ ಮುಗಿಸುವಂತೆ ಆಗ್ರಹಿಸಲಾಗಿದೆ. ಹಾಗೂ ಚಾರ್ಮಾಡಿ ಘಾಟಿಯ ಮಂಜು ಕೂಡ ಕಾರಣ ಎನ್ನಲಾಗಿದೆ. ಚಾರ್ಮಾಡಿಯಲ್ಲಿ ಕವಿದಿರೋ ಭಾರೀ ಪ್ರಮಾಣದ ಮಂಜು ಅಡಿ ದೂರದಲ್ಲಿ ಇರುವವರು ಕಾಣದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಪಘಾತದಿಂದ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಘಾಟಿಯಲ್ಲಿ ಸಿಲುಕಿ ವಾಹನ ಸವಾರರ ಪರದಾಡುವಂತೆ ಆಗಿದೆ. ಇನ್ನು ಕೆಲ ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.

Most Popular

Recent Comments