ನೆಲಮಂಗಲದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ನಿಗದಿಗೊಳಿಸಿದ್ದ ಸ್ಮಶಾನದ ಬಳಿ ಬಿಜೆಪಿ ಪಕ್ಷದ ನಾಯಕರ ಪ್ರಚಾರದ ಬ್ಯಾನರ್ ಅನ್ನು ಅಳವಡಿಸಿರುವುದನ್ನು ಕಂಡು ಕೆಂಡಾಮಂಡಲರಾದ ನಾಗರೀಕರು ಸಧ್ಯ ದೇಶಕ್ಕೆ ದೇಶವೇ ಸಂಕಷ್ಟದಲ್ಲಿದ್ದು ಇಂತಹ ಸಂಧರ್ಭದಲ್ಲೂ ಬಿಜೆಪಿ ನಾಯಕರು ಸುಡುಗಾಡಿನಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಗಿಡ್ಡೇನಹಳ್ಳಿ ಎಂಬಲ್ಲಿ ಕೋವಿಡ್ ನಿಂತ ಮೃತಪಟ್ಟವರ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿ ಬಿಜೆಪಿ ನಾಯಕರ ಫೋಟೋ ಸಮೇತ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಿರುವ ಈ ಕಾರ್ಯಕ್ಕೆ ಉಚಿತವಾಗಿ ಕಾಫಿ, ಟೀ, ನೀರು ಹಾಗೂ ಊಟದ ವ್ಯವಸ್ಥೆಯನ್ನು ಮಾಡಿರುವುದಾಗಿ ವಿವರಗಳ ಸಹಿತ ಬ್ಯಾನರ್ ಒಂದನ್ನು ಅಳವಡಿಸಲಾಗಿತ್ತು.
ಈ ವಿಷಯ ಸುದ್ಧಿಯಾಗುತ್ತಿದ್ದಂತೆಯೇ ಜನರು ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆ ನಂತರ ತಕ್ಷಣವೇ ಬೋರ್ಡ್ ಅನ್ನು ಎತ್ತಂಗಡಿ ಮಾಡಿದರು.