ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್ ವಿ ದತ್ತ ಅವರ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.
ಇದನ್ನೂ ಓದಿ; ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತಾ ವಿರುದ್ಧ41 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನೀಡಿದ್ದಾರೆ. 2014 ರಿಂದ 2023ರ ವರೆಗೆ ರಾಜ್ಯ ಹೊರರಾಜ್ಯಗಳಲ್ಲಿ 41 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ
ಚೆಕ್ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ. 2014ರಿಂದ 2020 ಅವಧಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.
ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರರಗಳು:
ವೈಎಸ್ ವಿ ದತ್ತಾ ಅವರ ಬಳಿ 2022-23 ರಲ್ಲಿ 8 ಲಕ್ಷದ 15 ಸಾವಿರ ಆದಾಯ ಹೊಂದಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚುನಾವಣಾ ಸಮಯದಲ್ಲಿ ಶೃಂಗೇರಿ ಕ್ಷೇತ್ರ ಬಿಜೆಪಿಗೆ ಮತ್ತೊಂದು ಆಘಾತ
- ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ
- ಪೊಲೀಸರ ಭರ್ಜರಿ ಕಾರ್ಯಾಚರಣೆ
ಚರಾಸ್ತಿ ಮತ್ತು ಸ್ಥಿರಾಸ್ತಿ ಎಷ್ಟು?:
17.89 ಲಕ್ಷ ಮೌಲ್ಯದ ಚರಾಸ್ತಿ,
2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಸಾಲ ಎಷ್ಟು?:
ಒಟ್ಟು 93.16 ಲಕ್ಷ ಸಾಲ ಪಡೆದುಕೊಂಡಿದ್ದಾರೆ.
ನ್ಯಾಯಾಲಯದಲ್ಲಿ ಇರುವ ಪ್ರಕರಣಗಳು ಎಷ್ಟು?;
* ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ,
* ಬೆಂಗಳೂರಿನ ಎಸಿಎಂಎಂ 12, 15,18, 19, 23, 26, 36ನೇ ನ್ಯಾಯಾಲಯಗಳಲ್ಲಿ ತಲಾ ಒಂದು,
* ಬೆಂಗಳೂರಿನ ಎಸಿಎಂಎಂ 22 ನೇ ನ್ಯಾಯಾಲಯದಲ್ಲಿ ಮೂರು,
* 42ನೇ ನ್ಯಾಯಾಲಯದಲ್ಲಿ 6 ಪ್ರಕರಣ,
* ಬೆಂಗಳೂರಿನ ಎಸ್ಸಿಸಿಎಚ್ 6ನೇ ಮತ್ತು 8ನೇ ನ್ಯಾಯಾಲಯಗಳಲ್ಲಿ ತಲಾ ಒಂದು,
* ಮಂಗಳೂರಿನ ಜೆಂಎಫ್ಸಿ ನ್ಯಾಯಾಲಯದಲ್ಲಿ 5 ಮತ್ತು 4ನೇ ಜೆಎಂಎಫ್ಸಿಯಲ್ಲಿ 3 ಪ್ರಕರಣ,
* ಅಥಣಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಎರಡು,
* ಹಾಸನ ನ್ಯಾಯಾಲಯದಲ್ಲಿ ಎರಡು,
* ಹಾಸನ ಜಿಲ್ಲೆ ಬೇಲೂರು, ಹುಬ್ಬಳ್ಳಿ, ಗದಗ ನ್ಯಾಯಾಲಯಗಳಲ್ಲಿ ತಲಾ ಒಂದು.
* ಅನಂತಪುರ ನ್ಯಾಯಾಲಯದಲ್ಲಿ ಒಂದು,
* ಗುಂತಕಲ್ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ; ಬಾವಿಗೆ ಹಾರಿ ರೈತ ಅತ್ಮಹತ್ಯೆ
ಚುನಾವಣಾ ಮೆರವಣಿಗೆಗೆ ಮಕ್ಕಳ ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ
ದಿನಾಂಕ 18 ಏಪ್ರಿಲ್ 2023ರಂದು ಕೊಡಗಿನ ವಿರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಗೆ ಮಕ್ಕಳನ್ನು ಬಳಕೆ ಮಾಡಿಕೊಂಡ ಕುರಿತು ಗಂಭೀರ ಆರೋಪ ಕೇಳಿಬಂದಿದ್ದು ಈ ಘಟನೆ ಸಂಬಂಧ ಚುನಾವಣೆ ಆಯೋಗ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು
ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಸಾವಿರಾರು ಸಂಖ್ಯೆ ಜನರೊಂದಿಗೆ ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ರ್ಯಾಲಿ ನಡೆಸಿದ್ದರು.
ಈ ಸಂದರ್ಭದಲ್ಲಿ ನೂರಾರು ಮಕ್ಕಳು ಕಾಂಗ್ರೆಸ್ ಶಾಲು, ಟೋಪಿ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು
ಚುನಾವಣಾ ಆಯೋಗ ಈಗಾಗಲೇ 18 ವರ್ಷದೊಳಗಿನ ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದ್ಧು ಈ ಬೆಳವಣಿಗೆ ಸಂಬಂಧ ಚುನಾವಣೆ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ
ಹಣ ನೀಡಿ ಜನರನ್ನು ಕರೆತಂದರು:
ಇನ್ನು ಹಣ ನೀಡಿ ಮೆರವಣಿಗೆಗೆ ಜನರನ್ನು ಕರೆದುಕೊಂಡು ಬಂದಿರುವುದು ಹಾಗೂ ಹೊರ ಊರುಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಂದಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಸಾಕಷ್ಟು ವೈರಲ್ ಆಗಿದೆ.