Sunday, December 3, 2023
Homeಮಲೆನಾಡುಚಿಕ್ಕಮಗಳೂರುTomato Theft: ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ

Tomato Theft: ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಟೊಮೆಟೊ ಹಣ್ಣಿನ ದರ ಹೆಚ್ಚಳವಾದ ಬೆನ್ನಲ್ಲೇ ನಗರದ ತರಕಾರಿ ಅಂಗಡಿಯೊಂದರಿಂದ ಟೊಮೆಟೊ ಕಳವಾದ ಬಗ್ಗೆ ದೂರು ದಾಖಲಾಗಿದೆ. ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮಾಟೋ ಇದ್ದ ಎರಡು ಟ್ರೇ ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೊ ಕಳ್ಳತನವಾಗಿದೆ.

ಇದನ್ನೂ ಓದಿ;  ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ

ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೊ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ. ನದೀಂ ಟೊಮೆಟೊ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ; ಹೊಸ ಫೋನ್‌ ಖರೀದಿಸಿದ್ರೆ 2 kg ಟೊಮೆಟೊ ಉಚಿತ!;ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕಳಸ :ಅವೈಜ್ಞಾನಿಕ ಕಾಮಗಾರಿಯಿಂದ ಕೆಸರುಮಯವಾದ ರಸ್ತೆ, ತುರ್ತು ಕ್ರಮಕ್ಕೆ ಒತ್ತಾಯ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡ್ಲಾರ್ ಮಕ್ಕಿ ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ರಸ್ತೆ ಕೆಸರಮಯವಾಗಿದ್ದು ಓಡಾಡಲು ಕಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಇದನ್ನೂ ಓದಿ; ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳ ಸೆರೆ

2 ತಿಂಗಳ ಹಿಂದೆ ಜಲಜೀವನ್ ಸ್ಕೀಮ್ ಅಡಿಯಲ್ಲಿ ರಸ್ತೆ ಬದಿಯಲ್ಲೇ ಪೈಪ್ ಅಳವಡಿಸಿ ಆ ಮಣ್ಣನ್ನು ರಸ್ತೆಗೆ ಹಾಕಿದ್ದರು. ಬಳಿಕ ಅದನ್ನು ಸರಿಯಾಗಿ ಡೋಸಿಂಗ್ ಮಾಡದ ಹಿನ್ನೆಲೆಯಲ್ಲಿ ಇದೀಗ ಆ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ, ಅತಿಯಾದ ಮಳೆಯ ಕಾರಣದಿಂದ ಓಡಾಡುವುದೇ ಸಮಸ್ಯೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಪ್ರೀತಮ್ ಹೆಬ್ಬಾರ್ ಒತ್ತಾಯಿಸಿದ್ದಾರೆ.

Most Popular

Recent Comments