Sunday, October 1, 2023
Homeಕರಾವಳಿನದಿಯಲ್ಲಿ ಮೀನು ಹಿಡಿಯಲು ತೆರಳಿ ಶೃಂಗೇರಿ ಮೂಲದ ಇಬ್ಬರು ಸೇರಿದಂತೆ ನಾಲ್ವರು ಯುವಕರು ಸಾವು

ನದಿಯಲ್ಲಿ ಮೀನು ಹಿಡಿಯಲು ತೆರಳಿ ಶೃಂಗೇರಿ ಮೂಲದ ಇಬ್ಬರು ಸೇರಿದಂತೆ ನಾಲ್ವರು ಯುವಕರು ಸಾವು

ಬ್ರಹ್ಮಾವರ: (ನ್ಯೂಸ್ ಮಲ್ನಾಡ್ ವರದಿ) ನದಿಯಲ್ಲಿ ಮೀನು ಹೆಕ್ಕಲು ಹೋದ ತಂಡವೊಂದರ ಮೂವರು ಬೋಟ್ ಮಗುಚಿ ಮೃತಪಟ್ಟಿದ್ದು, ಓರ್ವ ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಕುಕ್ಕುಡ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ರಮಝಾನ್ ರಜೆ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಬ್ರಹ್ಮಾವರ ಹೂಡೆಯ ಫೈಜಾನ್, ಇಬಾದ್, ಸಂಬಂಧಿ ಶೃಂಗೇರಿ ನಿವಾಸಿ ಸುಫಾನ್ ಮೃತರು.

ಶೃಂಗೇರಿಯ ಫರಾನ್ ಎಂಬಾತ ನಾಪತ್ತೆಯಾಗಿದ್ದು, ತಡವಾಗಿ ಆತನ ಶವವೂ ಪತ್ತೆಯಾಗಿದೆ. ತಡರಾತ್ರಿವರೆಗೂ ಶೋಧ ಕಾರ್ಯ ನಡೆಯಿತು. ಇನ್ನು, ಇವರ ಜೊತೆಗಿದ್ದ ಇನ್ನೂ ಮೂವರು ಯುವಕರು ಈಜಿ ಕುದ್ರು (ನದಿಯಲ್ಲಿರುವ ಸಣ್ಣ ದ್ವೀಪ) ಸೇರುವಲ್ಲಿ ಯಶಸ್ವಿಯಾಗಿ ಪ್ರಾಣ ಉಳಿಸಿಕೊಂಡರು.

ರಮ್ಫಾನ್ ರಜೆ ಹಿನ್ನೆಲೆಯಲ್ಲಿ ಒಟ್ಟು ಏಳು ಯುವಕರು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆಕುದ್ರುವಿಗೆ ಬೋಟ್ ನಲ್ಲಿ ತೆರಳಿದ್ದರು. ಇವರಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಬೋಟ್ ನಲ್ಲಿ ಏಳು ಮಂದಿ ಇದ್ದ ಕಾರಣ, ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಈ ಸಂದರ್ಭ ಏಳು ಮಂದಿಯೂ ನೀರಿಗೆ ಬಿದ್ದಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ವೇಳೆ ಮೂವರು ಈಜಿ ಕುದ್ರು ಸೇರಿಕೊಂಡಿದ್ದಾರೆ. ಉಳಿದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಸಾಕಷ್ಟು ಹುಡುಕಾಟದ ಬಳಿಕ ಮೂವರ ಮೃತದೇಹ ಪತ್ತೆಯಾಗಿದೆ. ಈ ಮೂವರು ಯುವಕರು ಒಂದೇ ಕುಟುಂಬದ ಸೋದರ, ಸೋದರಿಯರ ಮಕ್ಕಳು. ಸೋದರನ ಒಬ್ಬ ಮಗ ಮತ್ತು ಸೋದರಿಯ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.

ಇದನ್ನೂ ಓದಿ; ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು, ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸಲು ಸಹಕರಿಸಿದರು. ಮೃತದೇಹಗಳನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಘಿದೆ.

ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್

ಕೊಪ್ಪ/ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಲವು ಚಲನಚಿತ್ರ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದ ಮಲೆನಾಡಿನ ಪ್ರತಿಭಾನ್ವಿತ ನಟ ಸಂಪತ್ ಜಯರಾಮ್ (35) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸಿಗದಾಳು ಗ್ರಾಮದವರಾದ ಸಂಪತ್ ಕನ್ನಡದ ಹಲವು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದರು. ಅಗ್ನಿ ಸಾಕ್ಷಿ ದಾರಾವಾಹಿ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಕಂಬ್ಳಿಹುಳ, ಬಾಲಾಜಿ ಫೋಟೋ ಸೂಡಿಯೋ ಚಲನಚಿತ್ರಗಳಲ್ಲಿ ಸಹಜ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದರು.

ಶನಿವಾರ ರಾತ್ರಿ ನೆಲಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಸಂಪತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇತ್ತೀಚೆಗೆ ಅವರಿಗೆ ಯಾವುದೇ ನಟನೆಯ ಅವಕಾಶಗಳು ಬಂದಿರಲಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಈ ಘಟನೆಯು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇವರ ಅಕಾಲಿಕ ನಿಧನದಿಂದಾಗಿ ಅಭಿಮಾನಿಗಳು, ಚಿತ್ರರಂಗ ಕಂಬನಿ ಮಿಡಿಯುತ್ತಿದೆ

 

Most Popular

Recent Comments