Thursday, April 25, 2024
Homeಸುದ್ದಿಗಳುದೇಶ2000 ಮುಖಬೆಲೆಯ ಹಿಂಪಡೆಯಲು RBI ನಿರ್ಧಾರ.. ಸೆಪ್ಟೆಂಬರ್ 30 ನಂತರ ಬದಲಾಯಿಸೋಕೆ ಕೊನೆಯ ದಿನ

2000 ಮುಖಬೆಲೆಯ ಹಿಂಪಡೆಯಲು RBI ನಿರ್ಧಾರ.. ಸೆಪ್ಟೆಂಬರ್ 30 ನಂತರ ಬದಲಾಯಿಸೋಕೆ ಕೊನೆಯ ದಿನ

ದೆಹಲಿ (ನ್ಯೂಸ್ ಮಲ್ನಾಡ್) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿದೆ. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಅವಕಾಶ ಕಲ್ಪಿಸಿದೆ.

ಈ ಕುರಿತಾಗಿ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಈ ಮೂಲಕ ದೇಶಾದ್ಯಂತ 2000 ರೂ. ನೋಟು ಬ್ಯಾನ್ ಮಾಡುವ ನಿರ್ಧಾರ (Note Ban) ಕೈಗೊಳ್ಳಲಿವೆ.

ಸೆಪ್ಟೆಂಬರ್ 30ರ ನಂತರ 2000 ರೂ. ನೋಟು ಚಲಾವಣೆಯಲ್ಲಿ ಇರುವುದಿಲ್ಲ.

2000 ರೂ. ನೋಟು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. 2016 ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು. 2018ರಲ್ಲಿ 2000 ರೂ. ನೋಟು ಮುದ್ರಣವನ್ನು ಆರ್ಬಿಐ ಸ್ಥಗಿತಗೊಳಿಸಿತ್ತು.

ನೋಟು ಬದಲಾಯಿಸುವುದು ಹೇಗೆ?

ಈಗ 2,000 ರೂ. ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದುಕೊಂಡಿದ್ದು ನೋಟು ಬದಲಾವಣೆಗೆ (Note Exchange) ಸೆಪ್ಟೆಂಬರ್ 30ರವರೆಗೆ ಅವಕಾಶ ಕಲ್ಪಿಸಿದೆ. ಬ್ಯಾಂಕುಗಳಿಗೆ ತೆರಳಿ ನಿಮ್ಮ ಬಳಿ ಇರುವ 2000 ರೂ. ನೋಟುಗಳನ್ನು ನೀಡಿ ಬೇರೆ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಮೇ 23ರ ನಂತರ ಬ್ಯಾಂಕುಗಳಿಗೆ ಹೋಗಿ ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆಗೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ, 2023ರ ಸೆಪ್ಟಂಬರ್ 30ರವರೆಗೆ 2000 ನೋಟುಗಳನ್ನು ಡಿಪಾಸಿಟ್ (Deposit) ಮಾಡಬಹುದು, ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡಲು ಆರ್‌ಬಿಐ ಗ್ರಾಹಕರಿಗೆ ಅವಕಾಶ ನೀಡಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಜೋಡಿ ಕೊಲೆ ಪ್ರಕರಣ; ಊಟ ತಿಂಡಿ ವಿಚಾರಕ್ಕೆ ನಡೀತಾ ಮರ್ಡರ್!

ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿಯಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಕದಿಸಿದಂತೆ, ಬೆಳಿಗ್ಗೆ ಹಣಕ್ಕಾಗಿ ಡಬ್ಬಲ್ ಮರ್ಡರ್ ನಡೆದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಸ್ಪಷ್ಟಪಡಿಸಿದ್ದು, ಊಟದ ವಿಚಾರದಲ್ಲಿ ಗಲಾಟೆಯಾಗಿ ಮರ್ಡರ್ ಆಗಿರುವುದಾಗಿ ತಿಳಿಸಿದ್ದಾರೆ.

ವಿಶ್ವಕರ್ಮ ಭವನ ನಿರ್ಮಾಣಕ್ಕಾಗಿ ದಾವಣಗೆರೆ ಮೂಲದ ಬೀರೇಶ್ (35), ಮಂಜುನಾಥ್ (46) ಮತ್ತು ರಾಜಣ್ಣ ಎಂಬುವರು ತೀರ್ಥಹಳ್ಳಿಗೆ ಆಗಮಿಸಿರುತ್ತಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ರಾಜಣ್ಣ, ಬೀರೇಶ್, ಮಂಜುನಾಥ್ ಜೊತೆ ಇತರೆ ಇಬ್ಬರು ಸೇರಿ ಐದು ಜನ ಈ ಭವನ ನಿರ್ಮಾಣಕ್ಕೆ ಬಂದಿದ್ದರು. ಇವರಿಗೆಲ್ಲ ರಾಜಣ್ಣ ಅಡಿಗೆ ಮಾಡುವವನಾಗಿದ್ದಾನೆ ಎಂದು ತಿಳಿಸಿದ್ದಾರೆ.

ಭವನದ ಪಕ್ಕದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಇಲ್ಲಿ ತಯಾರಿಸಿದ ಇಡ್ಲಿ ಈ ಕಾರ್ಮಿಕರಿಗೆ ಬಂದಿತ್ತು. ಮದ್ಯಾಹ್ನದ ಹೊತ್ತಿಗೆ ರಾಜಣ್ಣ ಅಡುಗೆ ಮಾಡಿದ್ದನು. ಈ ಅಡುಗೆ ರಾತ್ರಿಯ ವೇಳೆ ಉಳಿದಿತ್ತು. ಇದನ್ನೇ ಸಂಬಾಳಿಕೊಂಡು ಊಟ ಮಾಡುವಂತೆ ಮಂಜಣ್ಣ ಮತ್ತು ಬೀರೇಶ್ ಗೆ ಹೇಳಿದ್ದನು ಎಂದು ಹೇಳಿದರು.

ಈ ವಿಚಾರದಲ್ಲಿ ಈ ಇಬ್ಬರು ಸೇರಿ ರಾಜಣ್ಣನಿಗೆ ಎಳೆದಾಡಿ ಹೊಡೆದಿದ್ದಾರೆ. ಆದರೆ ಊಟ ಮಾಡಿ ಮಲಗಿದ್ದ ಬೀರೇಶ್ ಮತ್ತು ಮಂಜಣ್ಣನ ಮೇಲೆ ಪಿಕಾಸಿಯಿಂದ ದಾಳಿ ನಡೆಸಿದ ರಾಜಣ್ಣ ಕೇಳಗಡೆ ಮಲಗಿದ್ದ ಬೀರೇಶ್ ಗೆ ಮತ್ತು ಟೆರಸ್ ಮೇಲೆ ಮಲಗಿದ್ದ ಮಂಜಣ್ಣನ ತಲೆಗೆ ಹೊಡೆದಿದ್ದಾನೆ ಇಬ್ವರು ಸ್ಥಳದಲ್ಲಿ ಸಾವು ಕಂಡಿದ್ದಾರೆ.

Most Popular

Recent Comments