ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಶೇ.83.28 ಫಲಿತಾಂಶ ದೊರೆತಿದೆ. ಕಳೆದ ವರ್ಷ 8.69,42 ಮತ ಗಳಿಸಿ 9ನೇ ಸ್ಥಾನ ಗಳಿಸಿತ್ತು. ಆದರೆ ಈ ವರ್ಷ ಜಿಲ್ಲೆ ಸುಧಾರಣೆ ಕಂಡಿದ್ದು ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ; ದಂಪತಿಗಳ ಬಲಿ ಪಡೆದ ಜವರಾಯ, ಭೀಕರ ಅಪಘಾತದಲ್ಲಿ ಮಕ್ಕಳ ಸ್ಥಿತಿಯೂ ಗಂಭೀರ
ಜಿಲ್ಲೆಯಲ್ಲಿ ಈ ಬಾರಿ 8427 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದು, ಈ ಪೈಕಿ 7018 ಮಂದಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 2910ರಲ್ಲಿ 2121, ವಾಣಿಜ್ಯ ವಿಭಾಗ 2892ರಲ್ಲಿ 2484, ವಿಜ್ಞಾನ ವಿಭಾಗದಲ್ಲಿ 2625 ರಲ್ಲಿ 2413 ವಿದ್ಯಾರ್ಥಿಗಳ ತೇರ್ಗಡೆಯಾಗಿದ್ದಾರೆ. ಅದರಲ್ಲಿ ನಗರ ಪ್ರದೇಶ 6103 ರಲ್ಲಿ 5115 ಹಾಗೂ ಗ್ರಾಮೀಣ ಪ್ರದೇಶದ 2324 ರಲ್ಲಿ 1903 ವಿದ್ಯಾರ್ಥಿಗಳಿದ್ದಾರೆ. ಬಾಲಕರಿಗಿಂತ ಈ ಬಾರಿ ವಿದ್ಯಾರ್ಥಿನಿಯರೇ ಹೆಚ್ಚು ತೇರ್ಗಡೆಯಾಗಿದ್ದಾರೆ.
ಕಳೆದ ವರ್ಷ ಜಿಲ್ಲೆ ಶೇ 69.42 ಫಲಿತಾಂಶ ಪಡೆದಿತ್ತು. ಈ ಬಾರಿ ಸುಧಾರಣೆ ಕಂಡಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿ ಫಲಿತಾಂಶ:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.95 ಫಲಿತಾಂಶ ಗಳಿಸಿದೆ. ಪರೀಕ್ಷೆಗೆ 215 ವಿದ್ಯಾರ್ಥಿಗಳು ಹಾಜರಾಗಿದ್ದರು. ವಿಜ್ಞಾನ ವಿಭಾಗದಲ್ಲಿ ಶೇ.100, ವಾಣಿಜ್ಯ ವಿಭಾಗದಲ್ಲಿ ಶೇ.97 ಹಾಗೂ ಕಲಾ ವಿಭಾಗದಲ್ಲಿ ಶೇ.90 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಸಾನವಿದೇವಿ (576), ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ (576), ಕಲಾ ವಿಭಾಗದಲ್ಲಿ ಸಂಜನಾ ತೆಳಗಡಿ (563) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ
ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಫಲಿತಾಂಶ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜೆಸಿಬಿಎಂ ಕಾಲೇಜಿನ 279 ವಿದ್ಯಾರ್ಥಿಗಳಲ್ಲಿ 212 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.97 ಫಲಿತಾಂಶ ಗಳಿಸಿದೆ. ವಾಣಿಜ್ಯ ವಿಭಾಗದ ಎ.ಶ್ರೀರಕ್ಷಾ(587) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ, ವಾಣಿಜ್ಯ ವಿಭಾಗದ ಎಂ.ಎ.ವಂದನಾ (585) ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ವಿಜ್ಞಾನ ವಿಭಾಗದ ಎಂ.ಎಸ್.ಐಶ್ವರ್ಯಾ(578) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾಳೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೆಟ್ರೋಲ್ ಬಂಕ್ ಗಳಲ್ಲಿ ಈ 6 ಸೇವೆಗಳನ್ನು ಉಚಿತವಾಗಿ ನೀಡುವುದು ಕಡ್ಡಾಯ
- ಪೋಸ್ಟ್ ಆಫೀಸ್ನಲ್ಲಿರುವ ಈ 5 ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?
- ಕಂತೆ ಕಂತೆ ಹಣ ಬ್ಯಾಗಿಗೆ ತುಂಬುವ ವಿಡಿಯೋ ವೈರಲ್
ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಪ್ಪದ ಫಲಿತಾಂಶ:
ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.90 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದಿದ್ದ 338 ವಿದ್ಯಾರ್ಥಿಗಳಲ್ಲಿ 304 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇ. 92.72 ಫಲಿತಾಂಶ ಗಳಿಸಿದೆ. 16 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 154 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 91.55 ಫಲಿತಾಂಶ ಪಡೆದಿದೆ. 14 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 70 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ 129 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಶೇ.86.82 ಫಲಿತಾಂಶ ಬಂದಿದೆ. 8 ಅತ್ಯುತ್ತಮ ಶ್ರೇಣಿಯಲ್ಲಿ, 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಾನ್ಯ ನಾಗರಾಜ್ 565 ಅಂಕ, ವಾಣಿಜ್ಯ ವಿಭಾಗದಲ್ಲಿ ವಿ.ಜೆ.ತೇಜಸ್ವಿನಿ 588 ಅಂಕ ಮತ್ತು ಕಲಾ ವಿಭಾಗದಲ್ಲಿ ಎಚ್.ಎಂ.ರಂಜಿತಾ 559 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಮ್ಮರಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಫಲಿತಾಂಶ:
ಕಮ್ಮರಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.97ರಷ್ಟು ಫಲಿತಾಂಶ ಪಡೆದಿದೆ. ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದರು, 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಎಸ್.ಜೆ.ನಿತಿನ್ 552, ಕೆ.ಆರ್.ನವ್ಯಶ್ರೀ 527 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂ.ಜಿ.ಶ್ವೇತಾ 512 ಅಂಕಗಳನ್ನು ಪಡೆದು ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ; ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ಜಯಪುರ ಬಿಜಿಎಸ್ ಕಾಲೇಜಿನ ಫಲಿತಾಂಶ:
ಬಿಜಿಎಸ್ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಎಲ್ಲ 25 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕೀರ್ತಿ ಭಟ್ (557), ಸಾನ್ವಿಪ್ರಿಯಾ (557) ವಿಭಾಗದಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 40 ವಿದ್ಯಾರ್ಥಿಗಳಲ್ಲಿ ೩೯ ಮಂದಿ ಉತ್ತೀರ್ಣರಾಗಿದ್ದಾರೆ. ಸಿಂಚನಾ ಜೆ.ಎಸ್.(588) ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದರೆ, ಶ್ರೀನಿಧಿ (581) ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾಳೆ. ಕಾಲೇಜಿನ ಒಟ್ಟು ಫಲಿತಾಂಶ ಶೇ.98.46 ಆಗಿದೆ ಎಂದು ಪ್ರಾಚಾರ್ಯ ಮುರಳೀಧರ್ ತಿಳಿಸಿದ್ದಾರೆ.
ಸರ್ಕಾರಿ ಪಿಯು ಕಾಲೇಜು ಬಾಳೆಹೊನ್ನೂರು;
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿಗೆ ಶೇ.85 ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ತಿಳಿಸಿದ್ದಾರೆ. ಕಾಲೇಜಿನ ಮೂರು ವಿಭಾಗಗಳಿಂದ 114 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ 96, ಕಲಾ ವಿಭಾಗದಲ್ಲಿ ಶೇ.84 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.78 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಮೈತ್ರಿ (558), ಟಿ.ಜೆ.ಪ್ರಕೃತಿ (557), ಎಚ್.ಸಿ.ನಿಶಾ (543), ಎ.ಜೆ.ಆತ್ಮಶ್ರೀ (538), ಅಲೆನ್ ಪವಲ್ ಸಿಕ್ವೆರಾ (514), ಜೆ.ಪಿ.ಪೂಜಾ (513) ಅಂಕ ಗಳಿಸಿ ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಹಮ್ಮದ್ ಫರಾಜ್ (547), ಇ.ಡಿ.ಸುಮನ್ (537), ಎಂ.ಮೇಘಾ (532), ಫೈಜಾ ರಫೀಕ್ ಸಾಹೇಬ್ (536), ಬಿ.ಸಿ.ಶಮಿತಾ (515) ಅಂಕ ಗಳಿಸಿ ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣ
ಬಾಳೆಹೊನ್ನೂರು ಬಿಜಿಎಸ್ ಕಾಲೇಜು ಫಲಿತಾಂಶ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಬಿಜಿಎಸ್ ವಿಜ್ಞಾನ, ವಾಣಿಜ್ಯ ಪದವಿಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಡಾ. ವೈ.ಎ.ಸುರೇಶ್ ತಿಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹಾಜರಾಗಿದ್ದ 42 ವಿದ್ಯಾರ್ಥಿಗಳಲ್ಲಿ 13 ಮಂದಿ ಅತ್ಯುನ್ನತ, 23 ಪ್ರಥಮ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜೆ.ಸಿ. ಅನನ್ಯಾ (580), ಉಲ್ಲಾಸ್ (572), ಸಂಚಿತಾ ಬಿ. ಶೆಟ್ಟಿ ಹಾಗೂ ಆರ್. ಯಶಸ್ (569) ಅಂಕಗಳಿಸಿ ಮೊದಲ ಮೂರು ಸ್ಥಾನಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಹಾಜರಾಗಿದ್ದ 39 ವಿದ್ಯಾರ್ಥಿಗಳಲ್ಲಿ 19 ಮಂದಿ ಅತ್ಯುನ್ನತ, 17 ಪ್ರಥಮ ಹಾಗೂ 3 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಹಮ್ಮದ್ ರಯಾನ್ (588), ಶ್ಯಾಮಿಲಿ ಕಿಕ್ಕೇರಿ (585), ಕೆ.ಎನ್.ಮೇಘನಾ (584) ಅಂಕಗಳಿಸಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ; ಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು
ಬಿಜಿಎಸ್ ಪಿಯು ಕಾಲೇಜು ಮೂಡಿಗೆರೆ ಫಲಿತಾಂಶ:
ಬಿಜೆಎಸ್ ಒಕ್ಕಲಿಗರ ಸಂಘದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 35 ವಿದ್ಯಾರ್ಥಿಗಳಲ್ಲಿ 15 ಅತ್ಯುನ್ನತ, 20 ಪ್ರಥಮ ಹಾಗೂ ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿ.ಎಸ್.ಸುಗಂಧಿ 573 ಅಂಕ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿ 18 ವಿದ್ಯಾರ್ಥಿಗಳು ಅತ್ಯುನ್ನತ, 11 ಪ್ರಥಮ, 1 ದ್ವಿತೀಯ ಶ್ರೇಣಿ ಗಳಿಸಿದ್ದಾರೆ, ಎಸ್.ಜಿ.ಸಹನಾ 583 ಅಂಕ ಪಡೆದಿದ್ದಾಳೆ. ಕಂಪ್ಯೂಟರ್ ಸೈನ್ ನಲ್ಲಿ 5, ಎಕನಾಮಿಕ್ಸ್ 1, ವ್ಯಾಪಾರ ವಿಭಾಗ 1, ಗಣಕ ವಿಭಾಗ 1 ವಿದ್ಯಾರ್ಥಿಗಳು ಶೇ.100 ರಷ್ಟು ಅಂಕ ಗಳಿಸಿದ್ದಾರೆ, ವಿದ್ಯಾರ್ಥಿಗಳನ್ನು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.
ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫಲಿತಾಂಶ:
ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣದ ಪದವಿ ಪೂರ್ವ ಕಾಲೇಜಿಗೆ ಶೇ.85.25ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ತವರಾಜ್ ಹೇಳಿದರು.
ವಿಜ್ಞಾನ ವಿಭಾಗದಲ್ಲಿ 122 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುನ್ನತ 14, ಪ್ರಥಮ 68, ದ್ವಿತೀಯ 17, ತೃತೀಯ 5 ತೇರ್ಗಡೆ ಹೊಂದಿದ್ದಾರೆ. ಶ್ರೇಯಾ ಆರ್. ಚಿತ್ತರಗಿ 552 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
ಇದನ್ನೂ ಓದಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಾವು
ವಾಣಿಜ್ಯ ವಿಭಾಗದಲ್ಲಿ 210 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 142 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ 6, ಪ್ರಥಮ 64, ದ್ವಿತೀಯ 38, ತೃತೀಯ 34, ಎಲ್.ದಿನೇಶ್ ಮತ್ತು ಎಂ.ವಿ.ರೇಣುಕಾ ಪ್ರಭು ತಲಾ 547 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ 363 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 271 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅತ್ಯುತ್ತಮ 16, ಪ್ರಥಮ 121, ದ್ವಿತೀಯ 62, ತೃತೀಯ 72, ಎಸ್. ಎಂ.ಯಶ್ವಂತ್ 570 ಅಂಕಗಳಿಸಿದ್ದಾರೆ ಎಂದರು.
ಕಡೂರು ಪಟ್ಟಣದ ಬಾಲಕಿಯರ ಕಾಲೇಜಿನ ಫಲಿತಾಂಶ:
ಪಟ್ಟಣದ ಕೆ.ಎಂ. ರಸ್ತೆಯಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ 92.3 ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ 52 ಜನ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಅತ್ಯುತ್ತಮ 7, ಪ್ರಥಮ 22, ದ್ವಿತೀಯ 8, ತೃತೀಯ ಶ್ರೇಣಿಯಲ್ಲಿ 4 ತೇರ್ಗಡೆ ಹೊಂದಿದ್ದಾರೆ.
ಎ.ಎಸ್.ದೀಕ್ಷಿತಾ 559 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ 41 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅತ್ಯುತ್ತಮ 5, ಪ್ರಥಮ 21, ದ್ವಿತೀಯ 7, ತೃತೀಯ ಶ್ರೇಣಿಯಲ್ಲಿ 4 ಮಂದಿ ಉತ್ತೀರ್ಣರಾಗಿದ್ದಾರೆ. ಭಾಗ್ಯಶ್ರೀ 551 ಅಂಕಗಳಿಸಿದ್ದಾರೆ.
ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ
ಕಲಾ ವಿಭಾಗದಲ್ಲಿ 82 ವಿದ್ಯಾರ್ಥಿನಿಯರು ಪರೀಕ್ಷೆ ಬರೆದು ಅತ್ಯುತ್ತಮ 9, ಪ್ರಥಮ 38, ದ್ವಿತೀಯ 20, ತೃತಿಯಾ 5, ಎನ್.ಜಿ ವಿನುತ 559 ಅಂಕಗಳಿಸಿದ್ದಾರೆ ಎಂದು ಪ್ರಾಚಾರ್ಯ ಕೆ.ಎಚ್.ರಾಜಪ್ಪ ತಿಳಿಸಿದರು.
ಚಿಕ್ಕಮಗಳೂರು ನಗರದ ಎಂಇಎಸ್ ಕಾಲೇಜಿನ ಫಲಿತಾಂಶ:
ಚಿಕ್ಕಮಗಳೂರು ನಗರದ ಎಂಇಎಸ್ ಕಾಲೇಜಿನ 260 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 236 ವಿದ್ಯಾರ್ಥಿಗಳ ಪೈಕಿ 47 ಮಂದಿ (ಶೇ.96) ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 155 ರಲ್ಲಿ 153 ಮಂದಿ (ಶೇ.ಶೇ 95.09) ತೇರ್ಗಡೆಯಾಗಿದ್ದಾರೆ, ಕಲಾ ವಿಭಾಗದಲ್ಲಿ 48 ವಿದ್ಯಾರ್ಥಿಗಳ ಪೈಕಿ 34 ಮಂದಿ (ಶೇ.72) ತೇರ್ಗಡೆಯಾಗಿದ್ದಾರೆ.
ಒಟ್ಟು ಉನ್ನತ ಶ್ರೇಣಿಯಲ್ಲಿ 60, ಪ್ರಥಮದರ್ಜೆ 117, ದ್ವಿತೀಯ 29, ತೃತೀಯ ಶ್ರೇಣಿಯಲ್ಲಿ 30 ಮಂದಿ ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರೇಕ್ಷಾ ಕೆ.ಎಸ್ 587, ಕಲಾ ವಿಭಾಗದ ನಿತೀಶ್ ನಂದಿ 586, ವಿಜ್ಞಾನ ವಿಭಾಗದ ಜಿವಿತಾ ಎಸ್.ಆರ್ 557 ಅಂಕ ಪಡೆಯುವ ಮೂಲಕ ಕಾಜೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಚಿಕ್ಕಮಗಳೂರು ನಗರದ ಸೇಂಟ್ ಮೇರಿಸ್ ಕಾಲೇಜಿನ ಫಲಿತಾಂಶ:
ಸೇಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಐಶ್ವರ್ಯಾ ವಿ, ಚೌಹಾನ್ 500 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ 9 ರ‍್ಯಾಂಕ್ ಗಳಿಸಿದ್ದಾಳೆ. ಇದರ ಜೊತೆಗೆ ಕಾಲೇಜು ಸಹ ಶೇ.100ರಷ್ಟು ಫಲಿತಾಂಶ ದಾಖಲಿಸಿದೆ.
ಪರೀಕ್ಷೆಯಲ್ಲಿ ಭಾಗವಹಿಸಿದ 305 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಜಿಲ್ಲಾವಾರು ಕಾಲೇಜುಗಳಿಗೆ ಹೋಲಿಸಿದರೆ ಸೇಂಟ್ ಮೇರಿಸ್ ಕಾಲೇಜಿನ 189 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದೇ ಅಧಿಕ. ಉಳಿದ 116 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ; ಹಿಂದು ಬ್ರಿಗೇಡ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಹಿಳಾ ಅಭ್ಯರ್ಥಿ
ವಾಣಿಜ್ಯ ವಿಭಾಗದಲ್ಲಿ ರಾಗಾ ಪಿ ಎಂಬ ವಿದ್ಯಾರ್ಥಿನಿ 600 ಕ್ಕೆ 589 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು, ಉಪನ್ಯಾಸಕರು ಸಿಹಿ ತಿನ್ನಿಸಿ ಅಭಿನಂದನೆ ತಿಳಿಸಿದ್ದಾರೆ.
ಕೆಎಲ್ ಕೆ ಪದವಿಪೂರ್ವ ಕಾಲೇಜು ಬೀರೂರು ಫಲಿತಾಂಶ:
ಕೆಎಲ್‌ಕೆ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.80ಫಲಿತಾಂಶ ಲಭಿಸಿದೆ. ಒಟ್ಟು 111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 88 ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳ ಪೈಕಿ 8 ಮಂದಿ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದ 47ರಲ್ಲಿ 35 ಮಂದಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ 54 ವಿದ್ಯಾರ್ಥಿಗಳಲ್ಲಿ 45 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು 3 ಅತ್ಯುನ್ನತ ಶ್ರೇಣಿ, 39 ಪ್ರಥಮದರ್ಜೆ, 28 ದ್ವಿತೀಯ ದರ್ಜೆ ಮತ್ತು 18 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ಎಚ್.ಕೆ.ಗೀತಾ 528 ಅಂಕಗಳೊಡನೆ ಕಾಲೇಜಿಗೆ ಅಗ್ರಸ್ಥಾನ ಗಳಿಸಿದರೆ, ಜಿ.ಎಸ್.ಪುನೀತ್ 525 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ