Tuesday, November 28, 2023
Homeವಿಶೇಷಸಿನಿಮೀಯಾ ರೀತಿಯಲ್ಲಿ 19 ರೋಗಿಗಳ ಜೀವ ಉಳಿಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಖಾಕಿ ತಂಡ

ಸಿನಿಮೀಯಾ ರೀತಿಯಲ್ಲಿ 19 ರೋಗಿಗಳ ಜೀವ ಉಳಿಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಖಾಕಿ ತಂಡ

ರಾಜ್ಯ ಪೊಲೀಸರ ಪ್ರತಿ ನಡೆಯನ್ನು ಪ್ರಶ್ನೆ ಮಾಡುವ ಮುನ್ನ ನಮ್ಮ ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳೋಣ ಎಂಬ ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಉದಾಹರಣೆ ಎಂಬಂತಹಾ ಕಾರ್ಯಾಚರಣೆಗೆ ಬೆಂಗಳೂರು ಪೊಲೀಸರು ಸಾಕ್ಷಿಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲೂ ಚಾರಮರಾಜನಗರ ರೀತಿಯ ಭೀಕರ ದರಂತ ಸಂಭವಿಸಲು ಇನ್ನೇನು ಕೆಲವೇ ಹೊತ್ತು ಇರುವಾಗಲೇ ಮಹಿಳಾ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸ್ ತಂಡ ನಡೆಸಿದ ಸಿನಿಮೀಯ ರೀತಿಯ ಕಾರ್ಯಾಚರಣೆ ಆ ಅವಘಡವನ್ನು ತಪ್ಪಿಸಿದೆ. ಮೇ 12ರ ರಾತ್ರಿ ನಡೆದ ಈ ಘಟನೆ ಒಮ್ಮೆ ಜನರನ್ನು ಬೆಚ್ಚಿ ಬೀಳಿಸಿದೆಯಾದರೂ ಪೊಲೀಸರು ಕೈಗೊಂಡ ಕಾರ್ಯಾಚರಣೆ ರಾಜಧಾನಿ ಜನರನ್ನು ನಿರಾಳವಾಗಿಸಿತು.ಮಧ್ಯರಾತ್ರಿ 12 ಗಂಟೆ ಕ್ರಮಿಸಿದ್ದು, ಜಗತ್ತು ನೀರವತೆಯ ನಿದ್ದೆಯಲ್ಲಿದ್ದಾಗಲೇ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳೀಯ ಶ್ರೇಯಸ್ ಆಸ್ಪತ್ರೆ ಭಯಾನಕ ಸನ್ನಿವೇಶ ಸೃಷ್ಟಿಯಾಯಿತು. ಕೊರೋನಾ ಸೋಂಕಿತರು ಸೇರಿದಂತೆ ಅನೇಕ ರೋಗಿಗಳು ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಯಿತು. ಈ ಅವಾಂತರದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸ್ಥಿತಿ ಅಯೋಮಯವೆನಿಸಿತು.

ಆ ಕೂಡಲೇ ಜೆ.ಸಿ.ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ಅವರಿಗೆ ಮಾಹಿತಿ ಸಿಕ್ಕಿದೆ. ಈ ಆಸ್ಪತ್ರೆ ಇದ್ದುದು ಬೇರೆಯೇ ಉಪವಿಭಾಗದಲ್ಲಾದರೂ ತಕ್ಷಣವೇ ಎಸಿಪಿ ರೀನಾ ಸುವರ್ಣ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಸ್ಥಳೀಯ ಇನ್‌ಸ್ಪೆಕ್ಟರ್ ಕಾಂತಾರಜ್ ಕೂಡಾ ಸ್ಥಳದಲ್ಲಿದ್ದುಕೊಂಡು ಕಾರ್ಯಾಚರಣೆಗಿಳಿದರು.ಜೀವವಾಯು ಸೋರಿಕೆಯ ಆಪತ್ತನ್ನು ಚಾಲಾಕಿತನದಿಂದಲೇ ನಿಭಾಯಿಸಬೇಕಾದ ಸಂದಿಗ್ಧ ಸ್ಥಿತಿ ಅದಾಗಿತ್ತು. ಅಗ್ನಿಶಾಮಕ ದಳ ಸಹಿತ ತುರ್ತು ಸೇವಾ ತಂಡಗಳೂ ಸ್ಥಳಕ್ಕೆ ದೌಡಾಯಿಸಿತಾದರೂ ಅದಾಗಲೇ ಸುಮಾರು 20 ರೋಗಿಗಳು ಆಮ್ಲಜನಕ ಇಲ್ಲದೆ ನರಳಾಡುವ ದುಸ್ಥಿತಿ ಎದುರಾಯಿತು. ಅದಾಗಲೇ ಕ್ಷಿಪ್ರ ನಿರ್ಧಾರ ಕೈಗೊಂಡ ಎಸಿಪಿ ರೀನಾ ತಂಡ ಸೋನು ಸೂದ್ ಟ್ರಸ್ಟನ್ನು ಸಂಪರ್ಕಿಸಿ ನೆರವು ಕೋರಿತು. ಆದರೆ ಸೋನು ಸೂದ್ ತಂಡದವರು ದೂರದಿಂದ ಆಗಮಿಸುವಷ್ಟರಲ್ಲಿ ಅನಾಹುತ ಸಾದ್ಯತೆಯ ಬಗ್ಗೆ ಮನಗಂಡ ಖಾಕಿ ತಂಡ ಫೋರ್ಟಿಸ್, ರೈನ್‌ಬೋ ಆಸ್ಪತ್ರೆಗಳನ್ನೂ ಸಂಪರ್ಕಿಸಿ ಕಾರ್ಯಾಚರಣೆಗೆ ವೇಗ ನೀಡಿತು. ಸಿನಿಮೀಯ ರೀತಿಯಲ್ಲಿ ಅಖಾಡದಲ್ಲಿ ಶ್ರಮಿಸಿದ ಪೊಲೀಸರು ಸೂದ್ ತಂಡದವರನ್ನೂ ಕರೆಸಿಕೊಂಡಿದೆ. ಸುಮಾರು 6 ಜಂಬೋ ಸಿಲಿಂಡರನನ್ನೂ ಶ್ರೇಯಸ್ ಆಸ್ಪತ್ರೆಗೆ ತರಿಸಲಾಯಿತು. ತಾರಾತುರಿಯಲ್ಲೇ ವ್ಯವಸ್ಥೆ ಸಿದ್ಧಗೊಳಿಸಿ ಸುಮಾರು 20 ಮಂದಿಯ ಜೀವಗಳನ್ನು ಉಳಿಸಲಾಯಿತು. ಇಂತಹಾ ಸನ್ನಿವೇಶಗಳನ್ನು ಸಿನಿಮಾದಲ್ಲಿ ನಾವು ಕಂಡಿದ್ದೆವು. ಇದೀಗ ಪೊಲೀಸರು ನಮ್ಮ ಕಣ್ಣಮುಂದೆಯೇ ಸಿನಿಮಾವನ್ನು ಮೀರಿದ ರೋಚಕ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶ್ರೇಯಸ್ ಆಸ್ಪತ್ರೆ ಬಳಿ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. ಕ್ಷಿಪ್ರ ಪರ್ಯಾಯ ಆಕ್ಸಿಜನ್ ವ್ಯವಸ್ಥೆಯಿಂದ ಆಸ್ಪತ್ರೆ ವೈದ್ಯರೂ ನಿರಾಳರಾದರು.

Most Popular

Recent Comments