ಒಂದು ವೇಳೆ ಹಲ್ಲುಗಳ ಸ್ವಚ್ಛತೆಯ ಕೊರತೆಯಿಂದಾಗಿ ಹಲ್ಲುಗಳ ಸಂಧುಗಳಲ್ಲಿ ಕೊಳೆತು ನೋವು ಎದುರಾಗಿದ್ದರೆ ಈ ವಿಧಾನ ಅತಿ ಸೂಕ್ತವಾಗಿದೆ. ಏನಾದರೂ ಜಗಿಯುವಾಗ ಹೆಚ್ಚು ನೋಯುವ ಹಲ್ಲುಗಳು ಉಳಿದ ಸಮಯದಲ್ಲಿ ನೋವು ಕೊಡದಿರುವುದು ಈ ಸೋಂಕಿನ ಲಕ್ಷಣವಾಗಿದೆ. ಉಪ್ಪು ನೀರು ಈ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸುವ ಮೂಲಕ ಹಲ್ಲುನೋವನ್ನು ಇಲ್ಲವಾಗಿಸುತ್ತದೆ.
ಇದಕ್ಕಾಗಿ ಉಗುರುಬೆಚ್ಚಗಿನ ಉಪ್ಪುನೀರನ್ನು ಆದಷ್ಟೂ ಹಲ್ಲುಗಳ ಸಂದುಗಳ ಮೂಲಕ ಹಾದುಹೋಗುವಂತೆ ಮುಕ್ಕಳಿಸಿಕೊಳ್ಳಬೇಕು. ಒಮ್ಮೆಲೇ ಕೆಲವು ಬಾರಿ ಮಾಡಿಕೊಂಡರೆ ಸಾಕು. ಹೆಚ್ಚು ಮುಕ್ಕಳಿಸಿದರೆ ಕೆನ್ನೆಗಳ ಸ್ನಾಯುಗಳು ನೋವು ನೀಡಬಹುದು. ಹಾಗಾಗಿ ಪ್ರತಿ ಘಂಟೆಗೊಂದು ಬಾರಿ ಮುಕ್ಕಳಿಸಿಕೊಳ್ಳುತ್ತಾ ಇದ್ದರೆ ಶೀಘ್ರ ನೋವಿನಿಂದ ಶಮನ ದೊರಕುತ್ತದೆ. ಅದರ ವಿಧಾನ: ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕ ಚಮಚದಷ್ಟು ಉಪ್ಪು ಬೆರೆಸಿ ಈ ನೀರಿನಿಂದ ಮುಕ್ಕಳಿಸಿ ಬಳಿಕ ಉಗಿಯಿರಿ