Friday, June 9, 2023
Homeವಿಶೇಷಆರೋಗ್ಯಹಲ್ಲಿನ ಒಸಡಿನ ಸಮಸ್ಯೆಗೆ ಪುದೀನಾ ಟೀ ಬ್ಯಾಗ್ ಪರಿಹಾರ!

ಹಲ್ಲಿನ ಒಸಡಿನ ಸಮಸ್ಯೆಗೆ ಪುದೀನಾ ಟೀ ಬ್ಯಾಗ್ ಪರಿಹಾರ!

ಹಲ್ಲು ನೋವಿಗೆ ಮನೆಮದ್ದು: ಒಂದು ವೇಳೆ ಹಲ್ಲುನೋವಿನ ಜೊತೆಗೆ ಒಸಡುಗಳೂ ಸಡಿಲವಾಗಿ ಹಲ್ಲುಗಳು ಸ್ವಲ್ಪವೇ ಅಲ್ಲಾಡುವಂತಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ನೀವು ಒಂದು ಪುದಿನಾ ಟೀ ಬ್ಯಾಗ್ ಒಂದನ್ನು ಕೊಂಚವೇ ಬಿಸಿನೀರಿನಲ್ಲಿ ಬೆರೆಸಿ ಮೆತ್ತಗಾಗುವವರೆಗೂ ಇರಿಸಿ. ಬಳಿಕ ಈ ಬ್ಯಾಗ್ ಅನ್ನು ನೋವಿರುವ ಭಾಗದ ಮೇಲೆ ಇರಿಸಿ.

ಕೊಂಚ ಹೊತ್ತು ಇರಿಸಿದ ಬಳಿಕ ಮತ್ತೊಮ್ಮೆ ಬಿಸಿನೀರಿನಲ್ಲಿ ಮುಳುಗಿಸಿ ಇತರ ಭಾಗದ ಮೇಲೂ ಇರಿಸಿ. ಹೀಗೇ ನೋವಿರುವ ಎಲ್ಲಾ ಭಾಗದ ಒಸಡುಗಳಿಗೆ ತಾಕುವಂತೆ ಈ ಟೀ ಬ್ಯಾಗ್ ಇರಿಸುತ್ತಾ ಬನ್ನಿ. ಒಂದು ವೇಳೆ ನಿಮ್ಮ ಒಸಡುಗಳು ಬಿಸಿಯನ್ನು ಸಹಿಸಲು ಸಾಧ್ಯವಿಲ್ಲದಿದ್ದರೆ ಆ ಟೀ ಬ್ಯಾಗ್ ಅನ್ನು ಫ್ರೀಜರ್ ನಲ್ಲಿ ಕೆಲವು ನಿಮಿಷ ಇರಿಸಿ ತಣ್ಣಗಿದ್ದಂತೆಯೇ ಒಸಡುಗಳ ಮೇಲೆ ಇರಿಸಬಹುದು.

Most Popular

Recent Comments