ಯೋಗದಲ್ಲಿ ದೇಹ ಮತ್ತು ಮನಸ್ಸನ್ನು ಎರಡು ವಿಷಯಗಳನ್ನಾಗಿ ಪರಿಗಣಿಸುವುದಿಲ್ಲ. ನಿಮ್ಮ ಮೆದುಳು ನಿಮ್ಮ ದೇಹದ ಒಂದು ಭಾಗ. ನಾವು ಏನನ್ನು ಮನಸ್ಸು ಎಂದು ಹೇಳುತ್ತೇವೆಯೋ ಅದು ಒಂದು ನಿರ್ದಿಷ್ಟವಾದ ನೆನಪುಗಳು ಮತ್ತು ಬುದ್ಧಿವಂತಿಕೆ. ದೇಹದ ಮಿಕ್ಕ ಭಾಗಗಳು ಮತ್ತು ಮೆದುಳಿನ ನಡುವೆ ಯಾವುದಕ್ಕೆ ಹೆಚ್ಚು ನೆನಪಿನ ಶಕ್ತಿಯಿದೆ ಮತ್ತು ಯಾವುದಕ್ಕೆ ಹೆಚ್ಚು ಬುದ್ದಿವಂತಿಕೆ ಇದೆ? ನೀವು ಸೂಕ್ಷ್ಮವಾಗಿ ನೋಡಿದರೆ ನಿಮ್ಮ ದೇಹದ ನೆನಪಿನ ಶಕ್ತಿ ಸಹಸ್ರಾರು ವರ್ಷಗಳ ಹಿಂದಿನದು. ಅದಕ್ಕೆ ನಿಮ್ಮ ಮುತ್ತಾತಂದಿರು ಹೇಗಿರುತ್ತಿದ್ದರು ಎನ್ನುವುದೂ ತಿಳಿದಿದೆ. ನಿಮ್ಮ ಮನಸ್ಸಿಗೆ ಅಷ್ಟು ನೆನಪಿನ ಶಕ್ತಿ ಇದೆ ಎಂದು ಹೇಳಲಾಗುವುದಿಲ್ಲ. ಬುದ್ಧಿವಂತಿಕೆಗೆ ಬಂದಾಗ ಒಂದು ಡಿಎನ್ಎ ಅಣುವಿನಲ್ಲಿ ನಡೆಯುತ್ತಿರುವುದು ಎಷ್ಟು ಸಂಕೀರ್ಣವೆಂದರೆ ನಿಮ್ಮ ಪೂರ್ತಿ ಮೆದುಳು ಅದನ್ನು ಕಂಡುಹಿಡಿಯಲು ಸಾಧ್ಯವಿಲ್ಲ.
ಯೋಗ ಪದ್ಧತಿಯಲ್ಲಿ ಒಂದು ಭೌತಿಕ ಶರೀರವಿದೆ ಮತ್ತು ಒಂದು ಮಾನಸಿಕ ಶರೀರವಿದೆ. ಒಂದು ಬುದ್ಧಿವಂತಿಕೆ ಈ ಶರೀರದಲ್ಲಿ ಹರಿಯುತ್ತಿದೆ. ಜನರು ಸಾಮಾನ್ಯವಾಗಿ ಮೆದುಳೇ ಎಲ್ಲವೂ ಎಂದು ತಿಳಿದಿರುತ್ತಾರೆ, ಏಕೆಂದರೆ ಅದರಲ್ಲಿ ಆಲೋಚನಾ ಶಕ್ತಿಯಿದೆ ಎಂದು. ದೇಹ ಮತ್ತು ಮನಸ್ಸನ್ನು ಬೇರೆಯಾಗಿ ನೋಡುವ ಈ ಕಾರಣದಿಂದಲೇ ಬಹಳಷ್ಟು ಪಾಶ್ಚಾತ್ಯ ಜನರು ಅವರ ಜೀವನದ ಯಾವುದಾದರೂ ಒಂದು ಹಂತದಲ್ಲಿ ಖಿನ್ನತೆಯನ್ನು ಶಮನ ಮಾಡುವ ಚಿಕಿತ್ಸೆ ತೆಗೆದುಕೊಂಡಿರುತ್ತಾರೆ.
ಮನಸ್ಸಿನ ಮೇಲೆ ಆಹಾರದ ಪ್ರಭಾವ
ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ಅದು ನಮ್ಮ ಮನಸ್ಸಿನ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಒಬ್ಬ ಸಾದಾರಣ ಅಮೆರಿಕನ್ ವ್ಯಕ್ತಿ ಒಂದು ವರ್ಷಕ್ಕೆ 200 ಪೌಂಡ್ ಮಾಂಸವನ್ನು ತಿನ್ನುತ್ತಾನೆ. ನೀವು ಅದನ್ನು 50 ಪೌಂಡ್‍ಗೆ ಇಳಿಸಿದರೆ 75% ಜನರಿಗೆ ಖಿನ್ನತೆಯನ್ನು ಶಮನ ಮಾಡುವ ಔಷಧಿಗಳು ಬೇಕಾಗಿರುವುದಿಲ್ಲ ಎಂದು ನೋಡಬಹುದು. ಮಾಂಸ ಕಾಡಲ್ಲಿ ಅಥವಾ ಮರುಭೂಮಿಯಲ್ಲಿ ಬದುಕುವವರಿಗೆ ಬೇಕು. ನೀವು ಎಲ್ಲಾದರೂ ಕಳೆದುಹೋದರೆ ಮಾಂಸ ನಿಮ್ಮನ್ನು ಬಹಳ ದಿನ ಬದುಕಿಸುತ್ತದೆ ಏಕೆಂದರೆ ಅದು ನಿಮಗೆ ಕೇಂದ್ರೀಕೃತವಾದ ಪೋಷಣೆಯನ್ನು ಕೊಡುತ್ತದೆ. ಆದರೆ ಅದು ದಿನಚರಿಯಾಗಬಾರದು ಪ್ರತ್ಯೇಕವಾಗಿ ನಿಮಗೆ ತಿನ್ನಲು ಬೇರೆ ಆಹಾರ ಇರುವಾಗ.
ಇದನ್ನು ಬೇರೆ ಬೇರೆ ರೀತಿಯಲ್ಲಿ ನೋಡಬಹುದು. ಪ್ರಾಣಿಗಳಿಗೆ ಅವು ಇನ್ನು ಸ್ವಲ್ಪ ಸಮಯದಲ್ಲಿ ಸಾಯುತ್ತವೆ ಎಂದು ತಿಳಿದುಬಿಡುತ್ತದೆ. ನೀವು ಎಷ್ಟೇ ಕುತಂತ್ರದಿಂದ ಅಥವಾ ಎಷ್ಟೇ ವೈಜ್ಞಾನಿಕವಾಗಿ ಮಾಡಿದರೂ ಸರಿ. ಯಾವುದೇ ಪ್ರಾಣಿಗೆ ಅದರ ಸಾವನ್ನು ತಿಳಿಯುವಷ್ಟು ಬುದ್ದಿವಂತಿಕೆ ಇರುತ್ತದೆ ಮತ್ತು ಭಾವನೆ ಬರುತ್ತದೆ.
ನಿಮ್ಮನ್ನು ಈ ಸಂಜೆಗೆ ಖಸಾಯಿಖಾನೆಗೆ ಕರೆದುಕೊಂಡು ಹೋಗುತ್ತಿದ್ದಾರೆಂದು ನಿಮಗೆ ತಿಳಿಯಿತು ಎಂದುಕೊಳ್ಳೋಣ. ನಿಮಗೆ ಎಷ್ಟು ತಳಮಳವಾಗಬಹುದು ಮತ್ತು ನಿಮ್ಮಲ್ಲಿ ಎಷ್ಟು ವಿಧವಾದ ರಾಸಾಯನಿಕ ಕ್ರಿಯೆಗಳು ನಡೆಯಬಹುದು ಎಂದು ಕಲ್ಪಿಸಿಕೊಳ್ಳಿ. ಒಂದು ಪ್ರಾಣಿಯಲ್ಲಿ ನಿಮ್ಮಲ್ಲಿ ನಡೆಯುವ ಕ್ರಿಯೆಗಳ ಒಂದು ಸ್ವಲ್ಪ ಪಾಲಾದರೂ ನಡೆಯುತ್ತದೆ. ಅದರ ಅರ್ಥ ಅದರಲ್ಲಿರುವ ಋಣಾತ್ಮಕ ಆಮ್ಲಗಲ್ಲೆಲ್ಲಾ ಆ ಮಾಂಸದಲ್ಲಿರುತ್ತದೆ, ನೀವು ಆ ಮಾಂಸವನ್ನು ಸೇವಿಸಿದರೆ ನಿಮ್ಮಲ್ಲಿ ಬೇಡದೆ ಇರುವ ಮಾನಸಿಕ ಏರಿಳಿತಗಳಾಗುತ್ತದೆ.
ನೀವು ನಿರುತ್ಸಾಹಕ್ಕೆ ಔಷಧಗಳನ್ನು ತೆಗೆದುಕೊಳ್ಳುವವರಿಗೆ ಮೂರು ತಿಂಗಳು ಸಸ್ಯಾಹಾರವನ್ನು ಕೊಟ್ಟರೆ ಅವರಲ್ಲಿ ಸುಮಾರು ಜನರಿಗೆ ಔಷಧಿಗಳ ಅವಶ್ಯಕತೆ ಬರುವುದಿಲ್ಲ. ನಾವು ಇದನ್ನು ನಮ್ಮ ಈಶ ಯೋಗ ಕೇಂದ್ರದಲ್ಲಿ ಎಷ್ಟೋ ಜನರಲ್ಲಿ ನೋಡುತ್ತಿದ್ದೇವೆ.
ಮಾನಸಿಕವಾಗಿ ರೋಗವಿರುವ ಬಹಳ ಜನರು ಅದನ್ನು ಅವರೊಳಗೆ ಬೆಳೆಸಿಕೊಂಡಿದ್ದಾರೆ. ಅವರಿಗೆ ನಿಜವಾಗಿಯೂ ರೋಗವಿಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ನಾವು ಸೃಷ್ಟಿಸಿ ಬೆಳೆಸಿಕೊಳ್ಳದೆ, ಬಹಳಷ್ಟು ಜನರು ಮಾನಸಿಕ ರೋಗಿಗಳಾಗಿರಲಾರರು. ನಾವು ವ್ಯವಹಾರಿಕ ವಿಷಯವನ್ನು ನಮ್ಮ ಜೀವನವದ ಶೈಲಿಯನ್ನು ನಿರ್ಧರಿಸಲು ಬಿಡಬಾರದು. ವ್ಯವಹಾರ ಇರುವುದು ಮಾನವನ ಸೇವೆಗಾಗಿ, ಆದರೆ ಈಗ ಪ್ರಪಂಚಾದ್ಯಂತ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ರಚಿಸಲ್ಪಟ್ಟಿದೆ, ಎಂದರೆ ಮನುಷ್ಯರು ಈ ಆರ್ಥಿಕ ಮತ್ತು ವ್ಯವಹಾರಿಕ ಕ್ರಿಯೆಯನ್ನು ಸೇವೆ ಮಾಡಲು ಬದುಕಿದ್ದಾರೆ ಎಂಬಂತಿದೆ. ನೀವು ವರ್ಲ್ಡ್ ಎಕನಾಮಿಕ್ ಫೋರಮ್ ಎಂದು ಹೇಳುತ್ತಿದ್ದೀರಿ. ನಾನು ಕೆಲವು ವರ್ಷಗಳ ಹಿಂದೆ ಅಲ್ಲಿದ್ದಾಗ, ಎಲ್ಲರೂ ಭಾರತವನ್ನು, ಚೀನಾ ಮತ್ತು ಇತರ ದೇಶಗಳನ್ನೂ ಸೂಚಿಸಿ ಮೇಲೆ ಬರುತ್ತಿರುವ ಮಾರುಕಟ್ಟೆಗಳೆಂದು ಮಾತನಾಡುತ್ತಿದ್ದರು.
ನಾನು ಹೇಳಿದೆ ” ದಯವಿಟ್ಟು ಮನುಷ್ಯರನ್ನು ಮಾರುಕಟ್ಟೆಗಳೆಂದು ಕರೆಯಬೇಡಿ. ನೀವು ಅವರನ್ನು ಮನುಷ್ಯರೆಂದು ನೋಡಿದರೆ, ಬಹುಷಃ ನಿಮಗೆ ಅವರ ಜೊತೆ ಹೇಗೆ ವರ್ತಿಸಬೇಕೆಂದು ಸರಿಯಾದ ಕಲ್ಪನೆ ಬರುತ್ತಿತ್ತೇನೋ. ನೀವು ಅವರನ್ನು ಮಾರುಕಟ್ಟೆಗಳೆಂದು ನೋಡಿದಾಗ ನೀವು ಬೇರೆಯದನ್ನೇ ಮಾಡುತ್ತೀರಿ! ಇದು ಮರುಕಟ್ಟೆಯಿಲ್ಲ ಇವರು ಮನುಷ್ಯರು.” ನೀವು ಮನುಷ್ಯರನ್ನು ಮನುಷ್ಯರಾಗಿ ನೋಡದಿದ್ದರೆ, ನೀವು ಪ್ರಾಣವನ್ನು ಪ್ರಾಣವನ್ನಾಗಿ ನೋಡದಿದ್ದರೆ ನೀವು ಅವರೊಳಗೆ ಏನನ್ನು ತುರುಕುತ್ತಿದ್ದೀರೆಂದು ನೀವು ಯೋಚಿಸುವುದಿಲ್ಲ. ನಿಮಗೆ ಹೆಚ್ಚು ಹಣವನ್ನು ಏನು ಕೊಡುತ್ತದೆಯೋ ಅದನ್ನೇ ನೀವು ಮಾರುತ್ತೀರಿ