ಢಾಕಾ: ಕೊರೋನಾ ಲಾಕ್ ಡೌನ್ ನಂತರ ಮೊದಲ ಭಾರಗಿ ಅಂತರಾಷ್ಟ್ರೀಯ ಪ್ರಾವಾಸ ಕೈಗೊಂಡಿರುವ ಮೋದಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ, ಬಾಂಗ್ಲಾದ ಪುರಾತಣವಾದ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಮಹಾಮಾರಿಯಿಂದ ಬೇಗ ಮುಕ್ತಿ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಬಾಂಗ್ಲಾದೇಶ ಪ್ರವಾಸದ ಎರಡನೇ ದಿನವಾದ ಇಂದು ಮೋದಿ ಬಾಂಗ್ಲಾದ ಸತ್ಖಿರಾ ಜಿಲ್ಲೆಯಲ್ಲಿರುವ ಅತ್ಯಂತ ಪುರಾಣ ಪ್ರಸಿದ್ಧ ಜೆಶೋರೇಶ್ವರಿ ಕಾಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಕಾಳಿ ದೇವಾಲಯವು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಗಡಿ ಪ್ರದೇಶದವಾದ ಈಶ್ವರಿಪುರ ಗ್ರಾಮದಲ್ಲಿದ್ದು, ಇಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಎರಡು ಕಡೆಯ ಜನರು ಪೂಜೆ ಸಲ್ಲಿಸುತ್ತಾರೆ.
ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ ಮಾಹಿತಿ ಪ್ರಕಾರ ಭಾರತ ಬಾಂಗ್ಲಾದೇಶ ಸರ್ಕಾರೊಂದಿಗೆ ಕಾಳಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಮಾಡಲು ಮನವಿ ಮಾಡಿಕೊಂಡಿದೆ. ಸಮುದಾಯ ಭವನವು ಭಕ್ತರಿಗೆ ವಿಶ್ರಾಂತಿ ಮತ್ತು ನೈಸರ್ಗಿಕ ವಿಪತ್ತಿನ ವೇಳೆ ವಸತಿಗಾಗಿ ಸಹಾಯವಾಗಲು ಭಾರತ ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ.