Sunday, June 4, 2023
Homeಲೇಖನಗಳುತಾನು NCC ಕೆಡೆಟ್ ಆಗಿದ್ದ ಬೆಟಾಲಿಯನ್ ಗೇ ಕಮಾಂಡಿಗ್ ಆಫೀಸರ್ ಆಗಿ ಬಂದ ಕನ್ನಡಿಗ ಯೋಧ!

ತಾನು NCC ಕೆಡೆಟ್ ಆಗಿದ್ದ ಬೆಟಾಲಿಯನ್ ಗೇ ಕಮಾಂಡಿಗ್ ಆಫೀಸರ್ ಆಗಿ ಬಂದ ಕನ್ನಡಿಗ ಯೋಧ!

ತಾನು NCC ಕೆಡೆಟ್ ಆಗಿದ್ದ ಬೆಟಾಲಿಯನ್ ಒಂದಕ್ಕೆ ಕಮಾಂಡಿಂಗ್ ಆಫೀಸರ್ ಆಗುವ ಅವಕಾಶ ಸಿಗುವುದು ಕೆಲವರಿಗಷ್ಟೆ. ಅಂತಹ ಬೆರಳೆಣಿಕೆ ಆಫೀಸರ್ ಗಳಲ್ಲಿ ನಮ್ಮ ಕರ್ನಾಟಕದ ದಿವಾಕರ ನಾಯ್ಡು ಕೂಡ ಒಬ್ಬರು.

ದಿವಾಕರ್ ನಾಯ್ಡು ಅವರ ತಂದೆ ಕೇಶವ ನಾಯ್ಡು, ಕರ್ನಾಟಕ ಸರ್ಕಾರದ ಸಣ್ಣ ಹುದ್ದೆಯೊಂದರಲ್ಲಿದ್ದವರು. 1958ರಲ್ಲಿ ಹಾಸನದಲ್ಲಿ ಜನಿಸಿದ ದಿವಾಕರ್, ತಂದೆಯ ವರ್ಗಾವಣೆಯ ನಂತರ ಬೆಳೆದಿದ್ದು ಶಿವಮೊಗ್ಗದಲ್ಲಿ. ತುಳಸಿ ಕಾಲೇಜ್ ಅಫ್ ಕಾಮರ್ಸ್ ನಲ್ಲಿ ಬಿ.ಕಾಂ ಮುಗಿಸಿದರು. ಮಿಲಿಟರಿ ಹಿನ್ನಲೆಯಲ್ಲದ ಕುಟುಂಬದಿಂದ ಬಂದ ದಿವಾಕರ್ ಗೆ ಚಿಕ್ಕಂದಿನಿಂದಲೂ ಸೇನೆಗೆ ಸೇರುವ ಕನಸಿತ್ತು. 1965 ಹಾಗೂ 1971 ರ ಇಂಡೋ-ಪಾಕ್ ಯುದ್ದದಲ್ಲಿ ಸಾವು-ನೋವು, ಈ ದೇಶದ ಸೈನಿಕರ ಪ್ರಾಣತ್ಯಾಗದ ಸುದ್ದಿಯನ್ನು ರೇಡಿಯೋ ಮೂಲಕ ಕೇಳುತ್ತಿದ್ದ ದಿವಾಕರ್ ಗೆ ಸೇನೆಗೆ ಸೇರುವ ಕನಸು ಇಮ್ಮಡಿಯಾಗಿತ್ತು. ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ಅವರನ್ನು ಭಾರತೀಯ ಸೇನೆಯ ಅಫೀಸರ್ ಹುದ್ದೆಗೇರುವಂತೆ ಮಾಡಿತು. ಇಂಡಿಯನ್ ಮಿಲಿಟರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ದಿವಾಕರ್, ಭಾರತೀಯ ಸೇನೆಯ ಮರಾಠ ಲೈಟ್ ಇನ್ಫ್ಯಾಂಟರಿ (MarathaLI) ರೆಜಿಮೆಂಟ್ ನ ಆಪೀಸರ್ ಆಗಿ ನೇಮಕಗೊಂಡರು. ‘ನಿದ್ದೆ ಮಾಡಿದಾಗ ಕಾಣುವುದು ಕನಸಲ್ಲ, ನಿಮ್ಮನ್ನು ಏನು ನಿದ್ದೆ ಮಾಡಲು ಬಿಡವುದಿಲ್ಲವೋ ಅದು ನಿಜವಾದ ಕನಸು’ ಎನ್ನುತ್ತಿದ್ದ ಡಾ. ಅಬ್ದುಲ್ ಕಲಾಂರ ಸಾಲುಗಳು ದಿವಾಕರ್ ಅವರ ಬದುಕಿನಲ್ಲಿ ಅಕ್ಷರಶಃ ಸತ್ಯವಾದವು.

ಸಮುದ್ರಮಟ್ಟದಿಂದ 18,000 ಅಡಿ ಎತ್ತರದಲ್ಲಿರುವ ಜಗತ್ತಿನ ಅತೀ ಎತ್ತರದ ಯುದ್ದಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್ ಸೇರಿದಂತೆ ಹತ್ತಾರು ಕಡೆ ಪೋಸ್ಟಿಂಗ್ ಪಡೆದ ದಿವಾಕರ್ ಸೇನೆಯ ಅತ್ಯನ್ನತ ರ್ಯಾಂಕ್ ಆದ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದರು. ಕಾಲೇಜು ದಿನದಲ್ಲಿ 20 ಕರ್ನಾಟಕ ಬೆಟಾಲಿಯನ್ ನ ಒಬ್ಬನೇ ಸಾಮಾನ್ಯ ಕೆಡೆಟ್ ಆಗಿದ್ದಾರೆ ದಿವಾಕರ್ ಅದೇ ಶಿವಮೊಗ್ಗದ 20 ಕರ್ನಾಟಕ ಬೆಟಾಲಿಯನ್ ನ ಕಮಾಂಡಿಗ್ ಅಫೀಸರ್ ಆಗಿ ನೇಮಕಗೊಳ್ಳುತ್ತಾರೆ. ಸೇನೆಯಿಂದ ನಿವೃತ್ತಿ ಪಡೆದ ನಂತರವೂ ಕರ್ಮಭೂಮಿ ಫೌಂಡೇಶನ್ ಎಂಬ NGO ಮೂಲಕ ಸಾವಿರಾರು ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಚಟುವಟಿಕೆ ನಡೆಸುತ್ತಿದ್ದಾರೆ.

Most Popular

Recent Comments