ಬಸವಕಲ್ಯಾಣ ; ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಶರಣು ಸಲಗರ ಅವರಿಗೆ ಟಿಕೆಟ್ ಘೋಷಿದ ಬೆನ್ನಲ್ಲೇ ಪಕ್ಷದಲ್ಲೇ ಅಸಮಾಧಾನ ಬುಗಿಲೆದಿದ್ದಿದೆ.
ಉಪ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದಿರುವ ಶರಣು ಸಲಗರ ಅವರು ನಾಮಪತ್ರ ಸಲ್ಲಿಸುವುದು ಬಾಕಿಯಿದೆ. ಆದರೆ ಈ ನಡುವೆ ಪಕ್ಷದಲ್ಲೇ ಒಳಜಗಳ ಪ್ರಾರಂಭವಾಗಿದ್ದು ಜೆಡಿಎಸ್ ಮಾಜಿ ಶಾಸಕ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾರುತಿ ರಾವ್ ಮೂಳೆಯವರು ಶರಣು ಸಲಗರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮರಾಠ ಸಮುದಾಯಕ್ಕೆ ಟಿಕೆಟ್ ನೀಡುವುದಾಗಿ ಅಮಿತ್ ಶಾ ಅವರು ಹೇಳಿದ್ದರು, ಆದರೆ ಇವೆಲ್ಲಾ ಸುಳ್ಳು. ಬಿಜೆಪಿ ಮರಾಠ ನಿಗಮದ ಹೆಸರಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಾತನಾಡಿ, ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ದೊಡ್ಡ ಡೀಲ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು ಈಗ ಆ ಅನುಮಾನ ನನಗೂ ಬರುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಬೈ ಎಲೆಕ್ಷನ್ ಟಿಕೆಟ್ ಶರಣು ಸಲಗರ ಅವರಿಗೆ ನೀಡಿರುವ ಬಿಜೆಪಿ ವಿರುದ್ದ ಖೂಬಾ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಕೊವಿಡ್ ಲಾಕ್ ಡೌನ್ ನಲ್ಲಿ ಬಸವಕಲ್ಯಾಣದ ಬಡ ಜನರಿಗೆ ಶರಣು ಸಲಗರ ಆಹಾರ ಕಿಟ್ ಗಳನ್ನು ನೀಡಿದ್ದರು ಅಲ್ಲದೇ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ಶರಣು ಮಾಡಿದ್ದಾರೆ.