Tuesday, November 28, 2023
Homeರಾಜ್ಯಜೊಮ್ಯಾಟೋ ಕೇಸ್ ಗೆ ಹೊಸ ಟ್ವಿಸ್ಟ್ ; ತನ್ನ ಉದ್ಯೋಗಿ ಪರ ಬ್ಯಾಟಿಂಗ್ ಮಾಡಿದ ಜೊಮ್ಯಾಟೋ

ಜೊಮ್ಯಾಟೋ ಕೇಸ್ ಗೆ ಹೊಸ ಟ್ವಿಸ್ಟ್ ; ತನ್ನ ಉದ್ಯೋಗಿ ಪರ ಬ್ಯಾಟಿಂಗ್ ಮಾಡಿದ ಜೊಮ್ಯಾಟೋ

ಬೆಂಗಳೂರು : ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಾಡಿದ್ದ ವೀಡಿಯೋ ಕಳೆದೆರಡು ದಿನದಿಂದ ಸಾಕಷ್ಟು ವೈರಲ್ ಆಗಿತ್ತು. ಕೇವಲ ಆಕೆಯ ಆರೋಪವನ್ನಷ್ಟೇ ಆಧಾರವಾಗಿಟ್ಟುಕೊಂಡು ಅನೇಕರು ಮಹಿಳೆಯ ಬೆಂಬಲಕ್ಕೆ ನಿಂತಿದ್ದರು. ಅಲ್ಲದೇ ಆರೋಪಿ, ಜೋಮ್ಯಾಟೋ ಡಿಲಿವರಿ ಬಾಯ್ ಕಾಮರಾಜ್ ನನ್ನು ಪೊಲೀಸರು ಬಂಧಿಸಿದ್ದರು ಆದರೆ ಜೊಮ್ಯಾಟೋ ಡಿಲಿವರ್ ಎಕ್ಸಿಕ್ಯುಟಿವ್ ಹೇಳಿಕೆಯ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ನಡದಿದ್ದೇನು? ತಪ್ಪು ಯಾರದ್ದು?

ತನಗೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆ ತಾನು ಆರ್ಡರ್ ಮಾಡಿರುವ ಆಹಾರ ತಡವಾಗಿದಕ್ಕೆ ಡೆಲಿವರಿ ಬಾಯ್ ನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ ಆತನನ್ನು ಕಾಯಿಸಿ ‘ನೀನು ಆರ್ಡರ್ ಡೆಲಿವರಿ ಲೇಟಾಗಿ ಮಾಡಿದ್ದರಿಂದ ಇದನ್ನು ಫ್ರೀಯಾಗಿ ನೀಡು ಇಲ್ಲವೇ ಆರ್ಡರ್ ಕ್ಯಾನ್ಸಲ್ ಮಾಡು’ ಎಂದು ಒತ್ತಾಯಿಸಿದ್ದಾರೆ. ಇದಕ್ಕೊಪ್ಪದ ಆರ್ಡರ್ ಬಾಯ್ ‘ನಾನೇನು ನಿಮ್ಮ ಗುಲಾಮನೇ?’ ಎಂದು ಪ್ರಶ್ನಿಸಿದ್ದಾನೆ ಬಳಿಕ ಆಕೆ ಕೋಪಗೊಂಡು ತನ್ನ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಕೈಯಲ್ಲಿದ್ದ ರಿಂಗ್ ಆಕೆಯ ಮೂಗಿಗೆ ತಾಗಿ ಗಾಯವಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಹಿತೇಶ ಚಂದ್ರಾಣಿ ಇನ್ಟ್ರಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬ್ಯೂಟಿ ಇನ್ಫೂಯನ್ಸರ್ ಆಗಿರುವ ಈಕೆಗೆ ಘಟನೆಯ ನಂತರ ಇನ್ಸ್ಟಾಗ್ರಾಂನಲ್ಲಿ ಸುಮಾರು 40 ಸಾವಿರಕ್ಕೂ ಆಧಿಕ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಒಟ್ಟಿನಲ್ಲಿ ಜನರನ್ನು ಆಕರ್ಷಿಸಲು ಹಿತೇಶ ಈ ರೀತಿ ಮಾಡಿದ್ದಾರೆಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ.

ತನ್ನ ಉದ್ಯೋಗಿ ಕಾಮರಾಜ್ ಕುರಿತು ಜೊಮ್ಯಾಟೋ ಹೇಳಿದ್ದೇನು?

ಇನ್ನು ಯುವತಿಯ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಉದ್ಯೋಗಿ ಕಾಮರಾಜ್ ಅವರ ಕೇಸ್ ನ ವೆಚ್ಚವನ್ನೂ ಕೂಡ ತಾವೇ ಭರಿಸುವುದಾಗಿ ಜೊಮ್ಯಾಟೋ ಹೇಳಿದೆ. ಕಾಮರಾಜ್ ಇಲ್ಲಿಯವರೆಗೂ 5000 ಕ್ಕೂ ಹೆಚ್ಚು ಆರ್ಡರ್ ಗಳನ್ನು ಡೆಲಿವರಿ ಮಾಡಿದ್ದಾರೆ, 4.7/5 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಎರಡಕ್ಕೂ ಹೆಚ್ಚು ವರ್ಷದಿಂದ ನಮ್ಮೊಂದಿಗೆ ಇದ್ದು ಎಲ್ಲರಲ್ಲೂ ಒಳ್ಳೆಯ ಅಭಿಪ್ರಾಯ ಪಡೆದಿದ್ದಾರೆ ಎಂದು ಜೊಮ್ಯಾಟೋ ತಿಳಿಸಿದೆ‌.

Most Popular

Recent Comments