ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಗಂಗೂಬಾಯಿ ಕಥಿಯಾವಾಡಿ ಚಿತ್ರದ ನಟಿ ಆಲಿಯಾ ಭಟ್ ಮತ್ತು ನಿರ್ಮಾಪಕರಾದ ಸಂಜಯ್ ಲೀಲಾ ಬನ್ಸಾಲಿ ಮುಂಬೈಯ ಮೆಟ್ರೊಪಾಲಿಟನ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಬಾಲಿವುಡ್ ಅಂಗಳದಲ್ಲಿ ಚಿತ್ರಿಸುತ್ತಿರುವ ಗಂಗೂಬಾಯಿ ಕಥಿಯಾವಾಡಿ ಚಿತ್ರ ಎಸ್ ಹುಸೈನ್ ಜೈದಿ ಮತ್ತು ಜೇನ್ ಬೋರ್ಗ್ಸ್ ಅವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಇದನ್ನು ಬನ್ಸಾಲಿ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯ ಲೇಖಕ, ಸಂಜಯ್ ಲೀಲಾ ಬನ್ಸಾಲಿ, ಹಾಗೂ ಆಲಿಯಾ ಭಟ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.
ಗಂಗೂಬಾಯಿ ಕಥಿಯಾವಾಡಿಯವರ ದತ್ತು ಮಗನಾಗಿರುವ ಬಾಬುಜಿ ಶಾ ಅವರು ವಕೀಲ ನರೇಂದ್ರ ದುಬೆ ಮೂಲಕ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ, ಕಥಿಯಾವಾಡಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಗೌರವಯುತವಾಗಿ ಜೀವನವನ್ನು ನಡೆಸುತ್ತಿದ್ದರು ಆದರೆ ಕಾದಂಬರಿಯಲ್ಲಿ ತಮ್ಮ ತಾಯಿಯ ಬಗ್ಗೆ ಬರೆದಿರುವ ಅಧ್ಯಾಯವು ನಿಂದನಕಾರಿಯಾಗಿದ್ದು ಅವರ ವ್ಯಕ್ತಿತ್ವ, ಗೌರವಕ್ಕೆ ಮಸಿ ಬಳಿಯಲಾಗಿದೆ, ಅವರ ವೈಯಕ್ತಿಕ ಬದುಕು ಮತ್ತು ಆತ್ಮ ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ದತ್ತುಪುತ್ರ ಬಾಬುಜಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ